ನ್ಯೂಸ್

ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟಕ್ಕೆ ಭಕ್ತಸಾಗರ

Webdesk - Narayanaswamy

ಕೋಲಾರ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ಶನಿವಾರ ಜನಜಾತ್ರೆ ನಡೆದಿದ್ದು, ಸಹಸ್ರಾರು ಮಂದಿ ಭಕ್ತರು ಸ್ವಾಮಿಗೆ ಹರಕೆ ತೀರಿಸಿದರು.

ಹಬ್ಬದ ದಿನವಾದ ಶುಕ್ರವಾರ ಮುಂಜಾನೆಯಿಂದಲೇ ಆಯೋಜಿಸಿದ್ದ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ಜಾಗರಣೆ ಸಲುವಾಗಿ ಹರಿಕಥೆ, ಭಜನೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇಡೀ ರಾತ್ರಿ ವಿವಿಧ ವಾಹನಗಳಲ್ಲಿ ರಂಡೋಪತಂಡವಾಗಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ಶನಿವಾರ ಜನಜಾತ್ರೆ ಇದ್ದು, ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಆನೇಪುರ, ವಕ್ಕಲೇರಿ ಮತ್ತಿತರ ಗ್ರಾಮಗಳ ಭಕ್ತರು ಪ್ರಸಾದ, ಕೋಸಂಬರಿ, ಮಜ್ಜಿಗೆ, ಪಾನಕ ಮತ್ತಿತರ ಸೇವೆಗಳನ್ನು ಒದಗಿಸಿದ್ದರು.

ಚಿತ್ರ: ಮಾರ್ಕಂಡೇಶ್ವರ ಬೆಟ್ಟದ ತಪ್ಪಲಿನಲ್ಲಿ ಆನೇಪುರ ಎಸ್​ಕೆಆರ್​ ರವಿ ಮತ್ತಿತರರು ಭಕ್ತರಿಗೆ ಕೋಸಂಬರಿ, ಮಜ್ಜಿಗೆ, ಪಾನಕ ಒದಗಿಸಿದ್ದರು.