More

    ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತನ ಹೊಸ ಫೋಟೋ ಬಿಡುಗಡೆ ಮಾಡಿದ ಎನ್‌ಐಎ

    ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶಂಕಿತನ ಹೊಸ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಆತನನ್ನು ಗುರುತಿಸಲು ಮತ್ತು ಬಂಧಿಸಲು ಸಹಾಯ ಮಾಡಲು ನಾಗರಿಕರಿಂದ ಸಹಾಯವನ್ನು ಕೋರಿದೆ.

    ಇದನ್ನೂ ಓದಿ:ಪ್ಯಾರಾಚೂಟ್ ವಿಫಲ: ಜನರ ಮೇಲೆ ಪರಿಹಾರ ಪೊಟ್ಟಣಗಳು ಬಿದ್ದ 5 ಮೃತ್ಯು!

    ಏಜೆನ್ಸಿಯು ಎರಡು ಫೋನ್ ಸಂಖ್ಯೆಗಳು ಮತ್ತು ಜನರು ಮಾಹಿತಿಯನ್ನು ಒದಗಿಸುವ ಮೇಲ್ ಐಡಿಯನ್ನು ಎನ್​ಐಎ ಹಂಚಿಕೊಂಡಿದೆ.

    ಎನ್​ಐಎ ತನ್ನ X ಖಾತೆಯಲ್ಲಿ, ಶಂಕಿತನನ್ನು ಗುರುತಿಸುವಲ್ಲಿ ಸಹಾಯ ಮಾಡಲು ನಾಗರಿಕರಿಂದ ಸಹಕಾರ ಕೋರಿದೆ. ಫೋನ್ ಅಥವಾ ಇಮೇಲ್ ಮೂಲಕ ಮಾಹಿತಿಯನ್ನು ಒದಗಿಸುವಂತೆ ಸಂಸ್ಥೆ ಜನರನ್ನು ಕೇಳಿದೆ. ಎರಡು ಫೋನ್ ಸಂಖ್ಯೆಗಳು (080-29510900 ಮತ್ತು 8904241100) ಮತ್ತು ಮೇಲ್ ಐಡಿ (info.blr.nia.gov.in) ಅನ್ನು ಸಹ ಹಂಚಿಕೊಳ್ಳಲಾಗಿದೆ. ನಿಮ್ಮ ಗುರುತು ಗೌಪ್ಯವಾಗಿರುತ್ತದೆ ಎಂದು #Bengaluru,Ca NIA ಟ್ವೀಟ್ ಮಾಡಿ ತಿಳಿಸಿದೆ.

    ಆರೋಪಿಯನ್ನು ಬಂಧಿಸಲು ಸಹಾಯ ಮಾಡುವ ಯಾವುದೇ ಮಾಹಿತಿಯೊಂದಿಗೆ ಜನರು ಮುಂದೆ ಬರುವಂತೆ ಒತ್ತಾಯಿಸುತ್ತಿರುವ ಎನ್‌ಐಎ ಶುಕ್ರವಾರ ಶಂಕಿತ ಆರೋಪಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಮತ್ತು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಿರುವ ಎರಡು ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ತನಿಖಾ ಸಂಸ್ಥೆ ಘೋಷಿಸಿತ್ತು.

    ಬೆಂಗಳೂರು ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗದ ಜೊತೆಗೆ ಕೇಂದ್ರ ಏಜೆನ್ಸಿಯು ತನಿಖೆ ಮುಂದುವರಿಸಿದೆ. ಆರೋಪಿ ಟೀ ಶರ್ಟ್, ಕ್ಯಾಪ್ ಮತ್ತು ಮಾಸ್ಕ್ ಧರಿಸಿ ಬ್ಯಾಗ್‌ನೊಂದಿಗೆ ಕೆಫೆಗೆ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವನು ಇಡ್ಲಿ ತಿಂದು ಹೊರಟು ಹೋದ ನಂತರ ಕೆಫೆಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದೆ ಎಂಬುದನ್ನು ತನಿಖಾ ಸಂಸ್ಥೆ ಗುರುತಿಸಿದೆ.

    ಸ್ಫೋಟದ ನಂತರ ಆರೋಪಿ ಬಸ್‌ ಹತ್ತಿ ತುಮಕೂರು, ಬಳ್ಳಾರಿ, ಬೀದರ್, ಭಟ್ಕಳದ ವಿವಿಧೆಡೆ ಸಂಚರಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಗುರುತು ಸಿಗದಂತೆ ತಪ್ಪಿಸಿಕೊಳ್ಳಲು ಅವನು ಆಗಾಗ್ಗೆ ಮಾರ್ಗ ಬದಲಾಯಿಸುತ್ತಿದ್ದನು ಎಂದು ತಿಳಿದುಬಂದಿದೆ.

    ‘ಎಕ್ಸ್’​ನಲ್ಲಿ ಶೀಘ್ರ ವೀಡಿಯೋ ಸ್ಟ್ರೀಮಿಂಗ್ ಸೇವೆ ! ಟಿವಿ ಪರದೆ ಮೇಲೆ ಏನೆಲ್ಲ ವೀಕ್ಷಿಸಬಹುದು? ವಿವರ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts