More

    ಪ್ಯಾರಾಚೂಟ್ ವಿಫಲ: ಜನರ ಮೇಲೆ ಪರಿಹಾರ ಪೊಟ್ಟಣಗಳು ಬಿದ್ದ 5 ಮೃತ್ಯು!

    ಗಾಜಾ: ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದ ಬಳಲುತ್ತಿರುವ ನಾಗರಿಕರಿಗೆ ಏರ್‌ಡ್ರಾಪ್ ಮೂಲಕ ನೆರವು ನೀಡುವ ಕೆಲಸ ಮಾಡಲಾಗುತ್ತಿದ್ದು, ಶುಕ್ರವಾರ ದುರಂತ ಸಂಭವಿಸಿದೆ. ಪರಿಹಾರ ಪೊಟ್ಟಣ ಕಳುಹಿಸುವ ಪ್ಯಾರಾಚೂಟ್ ವಿಫಲಗೊಂಡು ಆರಿಹಾರಕ್ಕಾಗಿ ಕಾಯುತ್ತಿದ್ದ ನಾಗರಿಕರ ತಲೆಗಳ ಮೇಲೆ ಪರಿಹಾರ ಪೊಟ್ಟಣಗಳು ಬಿದ್ದು ಐವರು ಮೃತಪಟ್ಟು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಶೈತಾನ್ ನಿರೀಕ್ಷೆಗೂ ಮೀರಿ ಪ್ರದರ್ಶನ: ಡೇ 1 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ವಿವರ ಇಲ್ಲಿದೆ..

    ಗಾಜಾ ನಗರದ ಶತಿ ನಿರಾಶ್ರಿತರ ಶಿಬಿರದ ಬಳಿ ನಾಗರಿಕರು ಪರಿಹಾರದ ಪ್ಯಾಕೇಜ್‌ಗಳಿಗಾಗಿ ಸರದತಿ ಸಾಲಿನಲ್ಲಿ ನಿಂತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಗಾಜಾ ಸರ್ಕಾರಿ ಮಾಧ್ಯಮ ಕಚೇರಿಯು ಸಾವುನೋವುಗಳ ಸಂಖ್ಯೆಯನ್ನು ದೃಢಪಡಿಸಿದೆ. ಏರ್‌ಡ್ರಾಪ್‌ಗಳನ್ನು ನಿಷ್ಟ್ರಯೋಜಕ ಎಂದು ಹೇಳಿದೆ. ಈ ಏರ್‌ಡ್ರಾಪ್‌ಗಳು ಕೇವಲ ಪ್ರಚಾರವೇ ಹೊರತು ಮಾನವೀಯ ಸೇವೆಯಲ್ಲ ಎಂದು ಅದು ಹೇಳಿದೆ.

    ಇದರೊಂದಿಗೆ ಭೂ ಗಡಿಯ ಮೂಲಕ ಆಹಾರ ಮತ್ತಿತರ ಸಾಮಗ್ರಿಗಳನ್ನು ಒದಗಿಸುವಂತೆ ಮನವಿ ಮಾಡಿದೆ. ಇದು ಗಾಜಾ ಪಟ್ಟಿಯ ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ನಾವು ಈಗಾಗಲೇ ಎಚ್ಚರಿಸಿದ್ದೇವೆ ಮತ್ತು ಅದು ಸಂಭವಿಸಿದೆ ಎಂದು ಮಾಧ್ಯಮ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ.

    ‘ಎಕ್ಸ್’​ನಲ್ಲಿ ಶೀಘ್ರ ವೀಡಿಯೋ ಸ್ಟ್ರೀಮಿಂಗ್ ಸೇವೆ ! ಟಿವಿ ಪರದೆ ಮೇಲೆ ಏನೆಲ್ಲ ವೀಕ್ಷಿಸಬಹುದು? ವಿವರ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts