More

    ಶೈತಾನ್ ನಿರೀಕ್ಷೆಗೂ ಮೀರಿ ಪ್ರದರ್ಶನ: ಡೇ 1 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ವಿವರ ಇಲ್ಲಿದೆ..

    ಮುಂಬೈ: ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ಅಭಿನಯದ ಶೈತಾನ್ ಮಾರ್ಚ್ 8 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಇದುವರೆಗಿನ ದೊಡ್ಡ ಓಪನರ್‌ಗಳಲ್ಲಿ ಒಂದಾಗುವ ಲಕ್ಷಣ ಕಂಡುಬರುತ್ತಿದೆ. ಮೊದಲ ದಿನ 10.8 ಕೋಟಿ ರೂ. ಗಳಿಸುವ ನಿರೀಕ್ಷೆಯಿತ್ತಾದರೂ ನಿರೀಕ್ಷೆ ಮೀರಿ ಗಳಿಕೆ ಮಾಡಿದೆ.

    ಇದನ್ನೂ ಓದಿ: ಆ ಪಕ್ಷ ಕೇಳಿದ್ದು ಆರು ಸ್ಥಾನ, ಸಿಕ್ಕಿದ್ದು ಒಂದೇ ಒಂದು ಕ್ಷೇತ್ರ! ಕಾಂಗ್ರೆಸ್​ ಪರಿಸ್ಥಿತಿಯೂ ಇಷ್ಟೇನಾ!

    ಶೈತಾನ್​ ಭಾರತದಲ್ಲಿ ತನ್ನ ಮೊದಲ ದಿನದ ಕಲೆಕ್ಷನ್​ 14.5 ಕೋಟಿ ರೂ. ಗಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಚಲನಚಿತ್ರವು ಶುಕ್ರವಾರ ಹಿಂದಿಯಲ್ಲಿ 25.70 ಪ್ರತಿಶತ ಆಕ್ಯುಪೆನ್ಸಿ ದರವನ್ನು ಹೊಂದಿದೆ. ಮತ್ತು ಜಾಂಕಿ ಬೋಡಿವಾಲಾ ಅವರು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರದ 195,000 ಟಿಕೆಟ್‌ ಮಾರಾಟವಾಗಿದೆ. ಎರಡನೇ ದಿನ 4.90 ಕೋಟಿ ಗಳಿಸಿದೆ. ಪ್ರಸ್ತುತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತಿರುವ ಶೈತಾನ್​ ಕನಿಷ್ಠ ಸ್ಪರ್ಧೆ ಎದುರಿಸುತ್ತಿದೆ. ರಣದೀಪ್ ಹೂಡಾ ಮತ್ತು ಇಲಿಯಾನಾ ಡಿಕ್ರೂಜ್ ಅಭಿನಯದ ತೇರಾ ಕ್ಯಾ ಹೋಗಾ ಲವ್ಲಿ ಸಹ ಇದೇ ದಿನಾಂಕದಂದು ಬಿಡುಗಡೆಯಾಗಿದ್ದು, ಸ್ಪರ್ಧೆ ಒಡ್ಡಿದೆ.

    ಅಜಯ್ ದೇವಗನ್ ಅವರ ಹಿಂದಿನ ಚಿತ್ರ, ಟಬು ಜೊತೆಗಿನ ಭೋಲಾ, ಆರಂಭಿಕ ದಿನ 11 ಕೋಟಿ ರೂ.ಗಳಿಸಿತ್ತು. ಅದು ಒಟ್ಟಾರೆ 90 ಕೋಟಿ ರೂ. ಗಳಿಸಿತ್ತು. ಶೈತಾನ್‌ನ ಮೊದಲ ದಿನದ ಗಳಿಕೆಯು 15.38 ಕೋಟಿ ರೂಪಾಯಿ ಗಳಿಸಿದ ದೃಶ್ಯಂ 2 ನ ಪ್ರಾರಂಭಕ್ಕೆ ಹೋಲಿಸಬಹುದು. ಬಲವಾದ ಆರಂಭದ ಹೊರತಾಗಿಯೂ, ದೃಶ್ಯಂ 2 ಭಾರತದಲ್ಲಿ 239 ಕೋಟಿ ರೂ.ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು. ಸವಾಲಿನ ಸಮಯದಲ್ಲಿ ಅಪರೂಪದ ಬಾಲಿವುಡ್ ಹಿಟ್ ಎಂದು ಸಾಬೀತಾಯಿತು.

    ಧೋಖಾ ರೌಂಡ್ ಡಿ ಕಾರ್ನರ್ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 3.25 ಕೋಟಿ ಗಳಿಸಿತು. ಯಶಸ್ವಿ ನೆಟ್‌ಫ್ಲಿಕ್ಸ್ ಸರಣಿ ದಿ ರೈಲ್ವೇ ಮೆನ್‌ನಲ್ಲಿನ ಪಾತ್ರಕ್ಕಾಗಿ ಮಾಧವನ್ ಗಮನ ಸೆಳೆದರು.

    ವಿಕಾಸ್ ಬಹ್ಲ್ ನಿರ್ದೇಶಿಸಿದ, ಶೈತಾನ್ ಕಥೆ ನೋಡುವುದಾದರೆ, ಕುಟುಂಬವೊಂದು ರಜೆಯ ಸಮಯದಲ್ಲಿ ನಿಗೂಢ ಅಪರಿಚಿತರಿಂದ ಹಿಂಸೆಯನ್ನು ಎದುರಿಸುತ್ತದೆ. ಹೀರೋ ವರ್ಸಸ್ ವಿಲನ್ ಡೈನಾಮಿಕ್ಸ್‌ನ ಮೇಲೆ ಕೇಂದ್ರೀಕರಿಸಿದ ಶೈತಾನ್ ಮಿಶ್ರ ವಿಮರ್ಶೆಗಳಿಗೆ ಗುರಿಯಾಗಿದೆ.

    9 ತಿಂಗಳ ನಂತರ ಖಲಿಸ್ತಾನಿ ಉಗ್ರ ನಿಜ್ಜರ್​ ಹತ್ಯೆಯ ವಿಡಿಯೋ ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts