ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಟ ಬಾಲಯ್ಯ ಎಂದೇ ಖ್ಯಾತರಾದ ನಟಸಿಂಹ ನಂದಮೂರಿ ಬಾಲಕೃಷ್ಣ ಅಭಿನಯಿಸಿದ್ದ 1994 ರಲ್ಲಿ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಹಿಟ್ ಆದ 'ಭೈರವ ದ್ವೀಪಂ' ಸಿನಿಮಾದ ರಿ-ರಿಲೀಸ್ ಇದೀಗ ರದ್ದಾದ ಸಂಗತಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.
ಇದನ್ನೂ ಓದಿ: 🔴LIVE: CM Siddaramaiah Reminisces His Advocate Days | Mysuru Bar Association | ನೆನಪು ಮೆಲುಕು ಹಾಕಿದ ಸಿದ್ರಾಮಯ್ಯ
ಬಾಲಯ್ಯ ನಟನೆಯ ಕ್ಲಾಸಿಕ್ ಹಿಟ್ 'ಭೈರವ ದ್ವೀಪಂ' ಚಿತ್ರವನ್ನು ಮತ್ತೊಮ್ಮೆ ಅಭಿಮಾನಿಗಳ ಮುಂದೆ ಮರು ಬಿಡುಗಡೆಗೊಳಿಸುವ ಮುಖೇನ ತರಲಾಗುವುದು ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿತ್ತು. ಆದ್ರೆ, ಇದೀಗ ಚಿತ್ರ ತಯಾರಕರು ರಿ-ರಿಲೀಸ್ ಅನ್ನು ದಿಢೀರ್ ರದ್ದಗೊಳಿಸಿದ್ದಾರೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಕಳಪೆ ಮುಂಗಡ ಬುಕಿಂಗ್‌ಗಳ ಕಾರಣದಿಂದಾಗಿ ನವೆಂಬರ್ 2023ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಅನಿಲ್ ರವಿಪುಡಿ ನಿರ್ದೇಶನದ ಆಕ್ಷನ್ ಜಾನರ್ನ 'ಭಗವಂತ ಕೇಸರಿ' ಚಿತ್ರವು ಅಕ್ಟೋಬರ್ 19, 2023 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದಲ್ಲಿ ಬಾಲಯ್ಯಗೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದಾರೆ. ಅರ್ಜುನ್ ರಾಂಪಾಲ್, ಸರತ್ ಕುಮಾರ್, ಟಿ.ಎನ್. ಬಾಲಕೃಷ್ಣ, ಶ್ರೀಲೀಲಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).