ಆಂಧ್ರಪ್ರದೇಶ: ಅನಿಲ್ ರವಿಪುಡಿ ನಿರ್ದೇಶನದ ಬಾಲಯ್ಯ ಎಂದೇ ಖ್ಯಾತರಾದ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಭಗವಂತ ಕೇಸರಿ' ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಉತ್ತಮವಾಗಿ ಸಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಚಿತ್ರತಂಡ ನಿರೀಕ್ಷಿಸಿದಂತೆ ಕಮಾಲ್ ಮಾಡುತ್ತಿದೆ. ಸದ್ಯ ಇದರೊಟ್ಟಿಗೆ ಯುಎಸ್ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರವು ಮೈಲಿಗಲ್ಲು ಸಾಧಿಸುವ ಮುಖೇನ ಎಲ್ಲರ ಗಮನವನ್ನು ಸೆಳೆದಿದೆ.
ಇದನ್ನೂ ಓದಿ: 7,000 ರೂ. ಹಿಂತಿರುಗಿಸಲು ಪತಿ ವಿಫಲ; ಪತ್ನಿಯನ್ನು ಕಿಡ್ನಾಪ್ ಮಾಡಿ ಮುಖಕ್ಕೆ ಗುದ್ದಿದ ಇಬ್ಬರು ಅಂದರ್!
ಬಿಡುಗಡೆಗೊಂಡ ದಿನದಿಂದಲೂ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ 'ಭಗವಂತ ಕೇಸರಿ' ಚಿತ್ರಕ್ಕೆ ಭಾನುವಾರದಂದು ಅಭೂತಪೂರ್ವ ಬೆಂಬಲ ದೊರಕಿದ್ದು, ಹಲವೆಡೆ ಹೌಸ್‌ಫುಲ್ ಆಗಿದೆ ಎಂದು ವರದಿ ಉಲ್ಲೇಖಿಸಿದೆ. ಚಿತ್ರವು ಆಂಧ್ರಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.
ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಯ್ಯಗೆ ನಾಯಕಿಯಾಗಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸಿದರೆ, ಸ್ಯಾಂಡಲ್ವುಡ್ನ ಬೆಡಗಿ ನಟಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ, 'ಭಗವಂತ ಕೇಸರಿ' ಚಿತ್ರ ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಒಂದು ಮಿಲಿಯನ್ ಡಾಲರ್ ಗಳಿಕೆಯನ್ನು ತಲುಪಿದೆ.
ಇದನ್ನೂ ಓದಿ: ಶತಕ ವಂಚಿತ ವಿರಾಟ್ ಕೊಹ್ಲಿ, ಈ ಸಾಧನೆ ಮಾಡಿದ ಎರಡನೇ ಭಾರತೀಯ: ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ ಶಮಿ
ಯುಎಸ್ ಬಾಕ್ಸ್ ಆಫೀಸ್‌ನಲ್ಲಿ ಬಾಲಯ್ಯ ನಟನೆಯ ಸಿನಿಮಾ ಸತತ ಮೂರನೇ ಬಾರಿಗೆ ಒಂದು ಮಿಲಿಯನ್ ಡಾಲರ್ ಕಲೆಕ್ಷನ್ ತಲುಪಿದೆ. ಇದರೊಂದಿಗೆ ಈ ಪ್ರಮುಖ ಸಾಧನೆ ಮಾಡಿದ ಮೊದಲ ಹಿರಿಯ ತೆಲುಗು ನಟ ಎಂಬ ಹೆಗ್ಗಳಿಕೆಗೆ ನಟ ಬಾಲಯ್ಯ ಪಾತ್ರರಾಗಿದ್ದಾರೆ,(ಏಜೆನ್ಸೀಸ್).