More

    ಶತಕ ವಂಚಿತ ವಿರಾಟ್ ಕೊಹ್ಲಿ, ಈ ಸಾಧನೆ ಮಾಡಿದ ಎರಡನೇ ಭಾರತೀಯ: ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ ಶಮಿ

    ಧರ್ಮಶಾಲಾ: ಐಸಿಸಿ ಟೂರ್ನಿಗಳಲ್ಲಿ ಕಳೆದ 20 ವರ್ಷಗಳಿಂದ ಕಾಡುತ್ತಿದ್ದ ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಬರವನ್ನು ಟೀಮ್ ಇಂಡಿಯಾ ಕೊನೆಗೂ ನವರಾತ್ರಿ ಹಬ್ಬದ ನಡುವೆ ನೀಗಿಸಿಕೊಂಡಿದೆ. ವೇಗಿ ಮೊಹಮದ್ ಶಮಿ (54ಕ್ಕೆ5) ಮಾರಕ ಬೌಲಿಂಗ್ ದಾಳಿ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (95 ರನ್, 104 ಎಸೆತ, 8 ಬೌಂಡರಿ, 2 ಸಿಕ್ಸರ್) ಶತಕ ವಂಚಿತ ಬ್ಯಾಟಿಂಗ್ ಬಲದಿಂದ ಭಾರತ ಐಸಿಸಿ ಏಕದಿನ ವಿಶ್ವಕಪ್‌ಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳಿಂದ ಜಯ ಸಾಧಿಸಿದೆ.
    ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಸೂಪರ್ ಸಂಡೇಯ ಬಲಿಷ್ಠರ ಕದನದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಡೆರಿಲ್ ಮಿಚೆಲ್ (130 ರನ್, 127 ಎಸೆತ, 9 ಬೌಂಡರಿ, 5 ಸಿಕ್ಸರ್) ಆಕರ್ಷಕ ಶತಕ ಹಾಗೂ ರಚಿನ್ ರವೀಂದ್ರ (75 ರನ್, 87 ಎಸೆತ, 6 ಬೌಂಡರಿ,1 ಸಿಕ್ಸರ್) ಒದಗಿಸಿದ ಬೆಂಬಲದ ಬಳಿಕ ಮೊಹಮದ್ ಶಮಿ ದಾಳಿಗೆ ತತ್ತರಿಸಿದ ಕಿವೀಸ್ ಭರ್ತಿ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಉತ್ತಮ ಆರಂಭದ ಬಳಿಕ ಹಿನ್ನಡೆ ಅನುಭವಿಸಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ (39*) ಜತೆಯಾಟದ ಬಲದಿಂದ 48 ಓವರ್‌ಗಳಲ್ಲಿ 6 ವಿಕೆಟ್‌ಗೆ 274 ರನ್‌ಗಳಿಸಿ ಸತತ 5ನೇ ಪಂದ್ಯದಲ್ಲಿ ಯಶಸ್ವಿ ಚೇಸಿಂಗ್ ಸಾಧಿಸಿತು.
    ಭಾರತ-ಕಿವೀಸ್ ಮುಖಾಮುಖಿಯಲ್ಲಿ ದಾಖಲಾದ ನೂತನ ದಾಖಲೆ ಕೆಳಗಿನಂತಿವೆ.

    4. ವಿರಾಟ್ ಕೊಹ್ಲಿ (13, 437) ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ಗಳಿಸಿದ ಸನತ್ ಜಯಸೂರ್ಯ (14, 430) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದರು. ತೆಂಡುಲ್ಕರ್ (18,426), ಸಂಗಕ್ಕರ (14,234), ರಿಕಿ ಪಾಂಟಿಂಗ್ (13,437) ಅಗ್ರ ಮೂವರು.

    2: ಮೊಹಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ 2 ಬಾರಿ 5 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಹಾಗೂ ಭಾರತದ ಮೊದಲ ಬೌಲರ್ ಎನಿಸಿದರು. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ (3) ಮೊದಲ ಸಾಧಕ.

    3: ಮೊಹಮದ್ ಶಮಿ (36) ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಪೈಕಿ ಅನಿಲ್ ಕುಂಬ್ಳೆ (31) ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದರು. ಜಹೀರ್ ಖಾನ್ (44), ಜಾವಗಲ್ ಶ್ರೀನಾಥ್ (44) ಮೊದಲ 2 ಸ್ಥಾನದಲ್ಲಿದ್ದಾರೆ.

    2: ವಿರಾಟ್ ಕೊಹ್ಲಿ 150 ಕ್ಯಾಚ್ ಹಿಡಿದ ವಿಶ್ವದ 4ನೇ ಫೀಲ್ಡರ್ ಹಾಗೂ 2ನೇ ಭಾರತೀಯ ಎನಿಸಿದರು. ಮೊಹಮದ್ ಅಜರುದ್ದೀನ್ (156) ಮೊದಲ ಭಾರತೀಯ ಸಾಧಕ.

    3: ರೋಹಿತ್ ಶರ್ಮ ಒಂದೇ ವರ್ಷದಲ್ಲಿ 50 ಸಿಕ್ಸರ್ ಸಿಡಿಸಿದ ವಿಶ್ವದ 3ನೇ ಮತ್ತು ಭಾರತದ ಮೊದಲ ಬ್ಯಾಟರ್ ಎನಿಸಿದರು. ಎಬಿ ಡಿವಿಲಿಯರ್ಸ್‌ (58), ಕ್ರಿಸ್ ಗೇಲ್ (56) ಈ ಸಾಧನೆ ಮಾಡಿದ ಮೊದಲಿಬ್ಬರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts