ನ್ಯೂಸ್

ನಗರದಲ್ಲಿ ಹೆಚ್ಚಿದ ಪುಂಡರ ಹಾವಳಿ: ರಾತ್ರಿಯಾಗ್ತಿದ್ದಂತೆಯೇ ರಸ್ತೆಗಿಳಿದು ಡೆಡ್ಲಿ ವ್ಹೀಲಿಂಗ್, ಅಪಘಾತಕ್ಕೆ ಆಹ್ವಾನ

ಬೆಂಗಳೂರು: ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ರಸ್ತೆಗಿಳಿದು ಅಪಾಯಕಾರಿ ವ್ಹೀಲಿಂಗ್ ಮಾಡುವ ಮೂಲಕ ಪುಂಡರ ಗ್ಯಾಂಗ್​ ಇತರೆ ಸವಾರರ ಸುರಕ್ಷಿತ ಪ್ರಯಾಣಕ್ಕೆ ಅಡ್ಡಿಯಾಗುತ್ತಿದ್ದಾರೆ.

ಸಿಟಿ ಮಾರುಕಟ್ಟೆಯ ಫ್ಲೈ ಓವರ್ ಮೇಲೆಯೇ ಡೆಡ್ಲಿ ವ್ಹೀಲಿಂಗ್ ನಡೆಯುತ್ತಿದೆ. ಹಲವು ವಾಹನಗಳ ಮಧ್ಯೆಯೇ ಗಂಟೆಗಟ್ಟಲೇ ವ್ಹೀಲಿಂಗ್ ಮಾಡುವ ಮೂಲಕ ಪುಂಡಾಟ ಮೆರೆಯುತ್ತಿದ್ದಾರೆ. ಖತರ್ನಾಕ್​ ಗ್ಯಾಂಗ್​, ವ್ಹೀಲಿಂಗ್ ಮಾಡುವ ವೇಳೆ ಅಕ್ಕಪಕ್ಕದ ವಾಹನ ಸವಾರರು ಭಯದಲ್ಲೇ ಸಾಗುವಂತಾಗಿದೆ.

ವ್ಹೀಲಿಂಗ್ ವೇಳೆ ಬೇರೆ ವಾಹನಗಳಿಗೆ ಸ್ವಲ್ಪ ಟಚ್ ಆದ್ರೂ ಡೆಡ್ಲಿ ಆ್ಯಕ್ಸಿಡೆಂಟ್ ಆಗುವುದು ಖಚಿತ. ಹೀಗಾಗಿ ಪುಂಡರ ಪುಂಡಾಟಕ್ಕೆ ಜೀವ ಕೈಲಿಟ್ಟುಕೊಂಡು ಸವಾರರು ಓಡಾಡುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ಫ್ಲೈ ಓವರ್​ಗೆ ಎಂಟ್ರಿ ಕೊಡಲಿರುವ ಪುಂಡರ ಗ್ಯಾಂಗ್​ ವಿರುದ್ಧ ಸದ್ಯ ಕ್ರಮ ಕೈಗೊಳ್ಳಬೇಕಿದೆ. (ದಿಗ್ವಿಜಯ ನ್ಯೂಸ್​)