ಬೆಂಗಳೂರು: ಚುನಾವಣಾ ಸಮಯ ಹತ್ತಿರುವಾಗುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಅಧಿಕಾರಗಳ ವರ್ಗಾವಣೆ ಜೋರಾಗಿಯೇ ನಡೆಯುತ್ತಿದೆ. ಚುನಾವಣಾ ಆಯೋಗದ ಸೂಚನೆಯಂತೆ ಕೆಲ ಅಧಿಕಾರಿಗಳ ವರ್ಗಾವಣೆ ನಡೆದರೆ, ಇನ್ನು ಕೆಲವು ಅಧಿಕಾರಿಗಳನ್ನು ಸರ್ಕಾರ ಸಾಮಾನ್ಯ ವರ್ಗಾವಣೆ ಮಾಡಿದೆ.
ಕಳೆದ ವಾರ ಜ.25ರಂದು ಒಂದೇ ದಿನ 23 ಡಿವೈಎಸ್ಪಿಗಳ ವರ್ಗಾವಣೆ ಆದೇಶ ಹೊರಬಂದಿತ್ತು. ನಿನ್ನೆ (ಜ.31) ಮತ್ತೊಮ್ಮೆ 40 ಡಿವೈಎಸ್ಪಿಗಳು ವರ್ಗಾವಣೆ ಮಾಡಲಾಗಿದೆ. ಇದೀಗ ಏಳು ಮಂದಿ ಎಸ್ಪಿ (ಸಿವಿಎಲ್) (ನಾನ್ ಐಪಿಎಸ್)ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಬ್ಬರು ಎಸ್ಪಿಗಳನ್ನು ವರ್ಗಾವಣೆಯಾಗಿದ್ದರೆ, ಐವರು ಎಎಸ್ಪಿಗಳನ್ನು ಸಾಮಾನ್ಯ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದವರ ಪಟ್ಟಿ ಈ ಕೆಳಕಂಡಂತಿದೆ.