ನ್ಯೂಸ್

ವಾಹನ ಸವಾರರಿಗೆ ಬಿಗ್​ ಶಾಕ್​: ಶೀಘ್ರವೇ ಈ ಹೆದ್ದಾರಿಯಲ್ಲಿ ಬೈಕ್, ಆಟೋ ಸಂಚಾರ ನಿಷೇಧ...

ಬೆಂಗಳೂರು: ದ್ವಿಚಕ್ರ, ತ್ರಿಚಕ್ರ ವಾಹನಗಳು, ಕೃಷಿ ವಾಹನಗಳಾದ ಟ್ರ್ಯಾಕ್ಟರ್ ಸೇರಿದಂತೆ ಇತರ ವಾಹನಗಳು ಜುಲೈ ಎರಡನೇ ವಾರ ನಂತರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರವೇಶಿಸುವಂತಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಈ ವಾಹನಗಳ ನಿಷೇಧದ ಕುರಿತಾಗಿ ಶೀಘ್ರವೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಇದು ಮುಂದಿನ 10 ರಿಂದ 15 ದಿನಗಳ ಒಳಗೆ ಜಾರಿಯಾಗಬಹುದು. ಮಾರ್ಚ್‌ನಲ್ಲಿ ಪ್ರಧಾನಿಯಿಂದ ಅಧಿಕೃತವಾಗಿ ಉದ್ಘಾಟನೆಯಾಗಿದ್ದ ಈ ರಸ್ತೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದು, ಈ ಹೆದ್ದಾರಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಟೈಟಾನ್​ ನೌಕೆಯ ಅವಶೇಷಗಳು ವಶಕ್ಕೆ: ಮಾನವನ ದೇಹದ ಭಾಗಗಳೂ ಪತ್ತೆ, ಹೆಚ್ಚಿನ ವಿಶ್ಲೇಷಣೆಗಾಗಿ ರವಾನೆ

ಕೇವಲ 90 ನಿಮಿಷಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತಲುಪಲು ಪ್ರಯಾಣಿಕರಿಗೆ ಸಹಾಯ ಮಾಡುವ 119-ಕಿಮೀ ಉದ್ದದ ಈ ಹೆದ್ದಾರಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ಚರ್ಚೆಗಳು ನಡೆದಿವೆ, ಈ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸುವ ಇತರ ವಾಹನಗಳಿಗೆ ಅಡೆತಡಯನ್ನುಂಟು ಮಾಡುತ್ತವೆಂದು ಹೇಳಲಾಗಿದೆ.

ದೆಹಲಿ-ಮೀರತ್ ಮತ್ತು ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇಗಳ ಮಾರ್ಗದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿದಂತೆಯೇ ಇಲ್ಲಿ ಸಹ ನಿಷೇಧ ಮಾಡಲಾಗುವುದು. ಸೂಚನೆ ಬಂದ ತಕ್ಷಣವೇ ನಿಷೇಧವನ್ನು ಜಾರಿಗೊಳಿಸಲಾಗುವುದು. ಮೇಲಿನ ಎಲ್ಲಾ ಪ್ರಕ್ರಿಯೆಗಳು 10-15 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎಂದು ಬೆಂಗಳೂರಿನರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೇಳಿದ್ದಾರೆ.

ಇದನ್ನೂ ಓದಿ: 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ನೆಚ್ಚಿನ ಗುರುವನ್ನು ಸನ್ಮಾನಿಸಿದ ಹಿರಿಯ ವಿದ್ಯಾರ್ಥಿಗಳು

ಸೂಪರ್‌ಬೈಕ್‌ಗಳಿಗೆ ಮಾತ್ರ ಈ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬಹುದೆಂದು ವಿಚಾರ ಮಾಡಲಾಗಿತ್ತು. ಆದರೆ ಬೈಕ್​ ಚಲಾಯಿಸುವವರು ಹೆಚ್ಚಾಗಿ ರಸ್ತೆಯಲ್ಲಿ ಶಿಸ್ತನ್ನು ಅನುಸರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಅವುಗಳನ್ನು ಸಹ ನಿಷೇಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್​​)