ನ್ಯೂಸ್

ದಶಪಥ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿ; ಮತ್ತೆ ಟೋಲ್ ದರ ಹೆಚ್ಚಳ! ಇಲ್ಲಿದೆ ವಿವರ…

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು, ಟೋಲ್ ದರ ಹೆಚ್ಚಳವಾಗಿದೆ. ಇದೀಗ ಸದ್ದಿಲ್ಲದೆ ಏರಿಕೆ ಆಗಿರುವ ಟೋಲ್ ದರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಎಕ್ಸ್​ಪ್ರೆಸ್​ ವೇಯಲ್ಲಿ ಮರವೇರಿ ಕುಳಿತ ಪೊಲೀಸರು; ಕಾರಣ ಇಷ್ಟೇ...

ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಮೊತ್ತದ ಟೋಲ್ ವಸೂಲಿ ಮಾಡಲಾಗುತ್ತಿದೆ. ಬಹುತೇಕ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಇರುವ ಕಾರಣ ಹೆಚ್ಚಿನ ಮೊತ್ತ ಕಡಿತವಾಗಿರುವುದು ವಾಹನ ಸವಾರರ ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.

2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಟೋಲ್‌ ದರವನ್ನು ಪರಿಷ್ಕರಿಸಲಾಗುತ್ತದೆ. ಕಳೆದ ಏ.1ರಂದು ಹೆದ್ದಾರಿ ಪ್ರಾಧಿಕಾರ ಟೋಲ್ ದರ ಏರಿಕೆ ಮಾಡಿತ್ತು. ಇದಕ್ಕೆ ವಾಹನ ಸವಾರರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಹೆಚ್ಚಳ ಆದೇಶವನ್ನು ಹಿಂಪಡೆಯಲಾಗಿತ್ತು. ಇದೀಗ ಮತ್ತೆ ಟೋಲ್ ದರ ಏರಿಕೆ ಮಾಡಲಾಗಿದೆ.

ಹೆಚ್ಚಳವಾದ ಟೋಲ್ ದರ ಹೀಗಿದೆ...

  • ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ ರೂ.135 ರಿಂದ ರೂ.165ಕ್ಕೆ ಏರಿಕೆ (30 ರೂ ಹೆಚ್ಚಳ)
  • ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ರೂ.220ರಿಂದ ರೂ.270ಕ್ಕೆ ಏರಿಕೆ(50ರೂ ಹೆಚ್ಚಳ)
  • ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ರೂ.460 ರಿಂದ ರೂ.565ಕ್ಕೆ ಏರಿಕೆ.(105 ಹೆಚ್ಚಳ)
  • 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ರೂ.500 ರಿಂದ ರೂ.615ಕ್ಕೆ ಏರಿಕೆ (115 ರೂ ಹೆಚ್ಚಳ)
  • ಭಾರಿ ವಾಹನಗಳ ಏಕಮುಖ ಸಂಚಾರ ರೂ.720ರಿಂದ ರೂ.885ಕ್ಕೆ ಏರಿಕೆ (165 ಹೆಚ್ಚಳ)
  • 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಎಕಮುಖ ಸಂಚಾರ ರೂ.880ರಿಂದ ರೂ.1,080ಕ್ಕೆ ಏರಿಕೆ (ರೂ.200 ಹೆಚ್ಚಳ).