ಬೆಳಗಾವಿ: ಮಹಾನಗರ ಪಾಲಿಕೆ ಮೇಯರ್ ಆಗಿ 57ನೇ ವಾರ್ಡ್ ನ ಬಿಜೆಪಿ ಸದಸ್ಯೆ ಶೋಭಾ ಸೋಮನಾಚೆ ಮತ್ತು ಉಪ ಮೇಯರ್ ಆಗಿ 33ನೇ ವಾರ್ಡ್ ನ ಬಿಜೆಪಿ ಸದಸ್ಯೆ ರೇಷ್ಮಾ ಮಾಟೀಲ ಆಗಿ ಆಯ್ಕೆಯಾಗಿರುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಮೇಯರ್ ಸ್ಥಾನಕ್ಕೆ ಶೋಭಾ ಸೋಮನಾಚೆ ಒಬ್ಬರೆ ನಾಮಪತ್ರ ಸಲ್ಲಿಸಿದ್ದಾರೆ. ಉಪಮೇಯರ್ ಸ್ಥಾನಕ್ಕೆ ರೇಷ್ಮಾ ಪಾಟೀಲ ಹಾಗೂ ಪಕ್ಷೇತರ ಸದಸ್ಯೆ ವೈಶಾಲಿ ನಾಮಪತ್ರ ಸಲ್ಲಿಸಿದ್ದಾರೆ. ಅತೀ ಹೆಚ್ಚು ಸ್ಥಾನಗಳನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಖಚಿತವಾಗಿದೆ. ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.
ಭಾಷೆವಾರು ಚುನಾವಣೆಗಿಂತ ಅಭಿವೃದ್ಧಿಪರ ಚಿಂತನೆಗೆ ಒತ್ತು ಕೊಟ್ಟಿದ್ದೇವೆ ಎಂದು ಹೇಳುವ ಮೂಲಕ ಶಾಸಕ ಅಭಯ್ ಪಾಟೀಲ್ ಕನ್ನಡಿಗರನ್ನು ಕಡೆಗಣಿಸಿ ಮರಾಠಿ ಭಾಷಿಕರಿಗೆ ಮಣೆ ಹಾಕಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ಮೇಲೆ ಚುನಾವಣೆ ಆಗಿದ್ದು, ಭಾಷಾ ವಿಚಾರ ಮುನ್ನಲೆಗೆ ಬರುವುದಿಲ್ಲ ಎಂದು ಆಯ್ಕೆ ಕುರಿತು ಬಿಜೆಪಿ ನಾಯಕರು ಸಮರ್ಥನೆ ಮಾಡಿದ್ದಾರೆ.