ನ್ಯೂಸ್

ಪೂರ್ತಿ ಕ್ಯಾಶ್​ ಕೊಟ್ಟು ಐಫೋನ್​ ಖರೀದಿಸಿದ ಭಿಕ್ಷುಕ! ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Beggar Buys iPhone

Beggar Buys iPhone : ಅನೇಕ ಜನರು ಐಫೋನ್ ಖರೀದಿಸುವ ಕನಸು ಕಂಡರೂ ದುಬಾರಿ ಬೆಲೆಯಿಂದಾಗಿ, ಅದನ್ನು ಇಎಂಐನಲ್ಲಿ ಅಥವಾ ತಿಂಗಳುಗಟ್ಟಲೆ ಹಣ ಉಳಿಸಿದ ನಂತರ ಖರೀದಿ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಭಿಕ್ಷುಕ ಪೂರ್ತಿ ಕ್ಯಾಶ್​ ನೀಡಿ ಐಫೋನ್ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಈ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ.

ಭಿಕ್ಷುಕನ ಹೆಸರು ಶೇಖ್​ ಷರೀಫ್‌. ಈತನಿಗೆ ಕಾಲುಗಳಿಲ್ಲದ ಕಾರಣ ಭಿಕ್ಷಾಟನೆ ಮಾಡಿ ಬದುಕು ನಡೆಸುತ್ತಿದ್ದಾನೆ. ಆದಾಗ್ಯೂ, ಒಟ್ಟು 1.7 ಲಕ್ಷ ನಗದು ಪಾವತಿಸಿ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಎಷ್ಟೇ ದುಡಿದರೂ ಐಫೋನ್​ ಖರೀದಿಸಲು ಹೆಣಗಾಡುವ ಮಂದಿಯ ನಡುವೆ ಭಿಕ್ಷಕ, ಕೇವಲ ಭಿಕ್ಷೆ ಎತ್ತಿದ ಹಣದಲ್ಲಿ ಐಫೋನ್​ ಖರೀದಿ ಮಾಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ.

ಶೇಖ್ ಷರೀಫ್ ಐಫೋನ್ ಖರೀದಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ. ಭಿಕ್ಷಾಟನೆಯೇ ಅತ್ಯುತ್ತಮ ವ್ಯವಹಾರ, ಹೂಡಿಕೆ ಮಾಡುವಂತಿಲ್ಲ, ಕೆಲಸ ಮಾಡುವ ಅಗತ್ಯವೂ ಇಲ್ಲ, ಕಷ್ಟವೂ ಇಲ್ಲ, ಒತ್ತಡವೂ ಇಲ್ಲ ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ದಿ ಸೈಸಾಟ್​ ಡೈಲಿ ( The Siasat Daily ) ಹೆಸರಿನ ಎಕ್ಸ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ವೈರಲ್​ ಆಗಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್​ ಮಾಡಿ ತಿಳಿಸಿ. (ಏಜೆನ್ಸೀಸ್​)