Beauty Queen: ಸಾಮಾನ್ಯವಾಗಿ ಪ್ರತಿವರ್ಷ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸ್ಪರ್ಧೆಯು ಪ್ರಪಂಚದಾದ್ಯಂತದ ಉನ್ನತ ಸ್ಪರ್ಧಿಗಳನ್ನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಈ ಸ್ಪರ್ಧೆಗೆ ಭಾಗವಹಿಸಲು ವಿಶ್ವದ್ಯಾಂತ ಬ್ಯೂಟಿ ಕ್ವೀನ್ಸ್ ಒಂಟಿ ಕಾಲಲ್ಲಿ ಕಾಯುತ್ತಿರುತ್ತಾರೆ. ಅದರಂತೆ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ಹಾದಿಯಲ್ಲಿದ್ದ ವಿಜೇತರೊಬ್ಬರ ಆಶ್ಲೀಲ ವೀಡಿಯೊ ಸೋರಿಕೆಯಾದ ನಂತರ ಅವರ ಪ್ರಶಸ್ತಿಯನ್ನು ಇದೀಗ ಹಿಂತೆಗೆದುಕೊಳ್ಳಲಾಗಿದ್ದು, ಕಾನೂನಿನ ಕುಣಿಕೆ ಎದುರಿಸುತ್ತಿದ್ದಾರೆ.
ಹೌದು, ಥಾಯ್ಲ್ಯಾಂಡ್ನ ಬ್ಯೂಟಿಕ್ವಿನ್ 27 ವರ್ಷದ ಬೇಬಿ ಅಲಿಯಾಸ್ ಸುಫನ್ನೀ ನೊಯಿನೊಂಥೋಂ ಅವರು ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸ್ಪರ್ಧೆಯ ಮುಂಚಿತವಾಗಿ ನಡೆಯುವ ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದಿಂದ ಸೌಂದರ್ಯ ಸ್ಪರ್ಧೆಯನ್ನು ಇತ್ತೀಚಿಗೆ ಗೆಲ್ಲುವ ಮೂಲಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಳು. ಆದರೆ. ಗೆದ್ದ ಕೆಲ ಗಂಟೆಗಳಲ್ಲೇ ಆಕೆಯ ಆಶ್ಲೀಲ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಆಗಿವೆ. ಅವಳು ಇ-ಸಿಗರೇಟ್ ಸೇದುವುದು, ಅಶ್ಲೀಲ ನೃತ್ಯಗಳು.. ವರ್ತನೆಗಳನ್ನು ಮಾಡುವುದರೊಂದಿಗೆ ವೀಡಿಯೊಗಳು ಚರ್ಚೆಯ ವಿಷಯವಾಯಿತು. ಪರಿಣಾಮವಾಗಿ ಮರುದಿನವೇ, ಸಂಘಟಕರು ಪ್ರಶಸ್ತಿಯನ್ನು ಹಿಂತೆಗೆದುಕೊಂಡರು ಮತ್ತು ಅವಳನ್ನು ಅನರ್ಹಗೊಳಿಸಲಾಗಿದೆ ಎಂದು ಘೋಷಿಸಿದರು.
ಅವಳನ್ನು ಅನರ್ಹಗೊಳಿಸಿದ ಬಳಿಕ ಆಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ವೀಡಿಯೊದಲ್ಲಿ ತಾನಿದ್ದೇನೆ ಎಂದು ಅವರು ಒಪ್ಪಿಕೊಂಡ ಬೇಬಿ, ಈ ಪರಿಣಾಮಕ್ಕಾಗಿ ಅವರು ಫೇಸ್‌ಬುಕ್‌ನಲ್ಲಿ ದೀರ್ಘ ಪೋಸ್ಟ್ ಅನ್ನು ಪೋಸ್ಟ್ ಮಾಡಿ, ಸಂಘಟಕರು ಮತ್ತು ಅವರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕರೊನಾ ಸಮಯದಲ್ಲಿ ತನ್ನ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು ಮತ್ತು ಆ ಸಮಯದಲ್ಲಿ ಆರ್ಥಿಕ ತೊಂದರೆಗಳಿಂದ ಹೊರಬರಲು ಅಶ್ಲೀಲ ವೆಬ್‌ಸೈಟ್‌ನಲ್ಲಿ ಕೆಲಸ ಮಾಡಬೇಕಾಯಿತು ಎಂದು ಬೇಬಿ ಹೇಳಿಕೊಂಡಿದ್ದಾಳೆ.
ಹಾಗೆ ಮಾಡಿದರೂ ತನ್ನ ತಾಯಿಯನ್ನು ಹೆಚ್ಚು ಕಾಲ ಜೀವಂತವಾಗಿಡಲು ಸಾಧ್ಯವಾಗಲಿಲ್ಲ ಮತ್ತು ಅಂದಿನಿಂದ ಅವಳು ಮತ್ತೆ ಅಂತಹ ಕೆಲಸಗಳಿಗೆ ಕೈ ಹಾಕಿಲ್ಲ ಎಂದಿದ್ದಾರೆ. ಈ ಘಟನೆ ತನಗೆ ಅಮೂಲ್ಯವಾದ ಪಾಠ ಕಲಿಸಿದೆ. ಜೀವನದಲ್ಲಿ ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ. ಸೌಂದರ್ಯ ರಾಣಿ ಕಿರೀಟವನ್ನು ಗೆದ್ದ ನಂತರವೇ ವಿಡಿಯೋಗಳು ಹೊರಬಂದಿವೆ. ಉದ್ದೇಶಪೂರ್ವಕವಾಗಿ ಅವುಗಳನ್ನು ಬಹಿರಂಗಪಡಿಸಿದವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದಾಗಿ ಅವರು ಎಚ್ಚರಿಸಿದ್ದಾರೆ.
ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೊದಲು ಒಪ್ಪಂದದಲ್ಲಿನ ಷರತ್ತಿನ ಪ್ರಕಾರ, ಸ್ಪರ್ಧಿಗಳು ಅಶ್ಲೀಲ ಚಟುವಟಿಕೆಗಳಿಂದ ದೂರವಿರುವುದಾಗಿ ಹೇಳುವ ಅಂಕಣಕ್ಕೆ ಸಹಿ ಹಾಕಬೇಕು. ಅದು ಸುಳ್ಳು ಎಂದು ಕಂಡುಬಂದರೆ, ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತದೆ. ಬೇಬಿ ಆ ಅಂಕಣಕ್ಕೆ ತಿಳಿದೇ ಸಹಿ ಹಾಕಿದ್ದರಿಂದ. ಕಾನೂನು ತಜ್ಞರು ಅವಳಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಎಚ್ಚರಿಸಿದ್ದಾರೆ.(ಏಜೆನ್ಸೀಸ್)