ನ್ಯೂಸ್

ಸುಂದರ ಕೂದಲು ಬೇಕೆಂದು ಬ್ಯೂಟಿ ಪಾರ್ಲರ್​​​ಗೆ ಹೋದ ಮಹಿಳೆ; ಆಮೇಲೇನಾಯ್ತು ಅಂದ್ರೆ…!

ಹೈದರಾಬಾದ್‌: 'ವಿಕ್ರಮಾರ್ಕೂಡು' ಚಿತ್ರದಲ್ಲಿ ಶೇವಿಂಗ್ ಸೀನ್ ನೆನಪಿದೆಯಾ... ಹೈದರಾಬಾದಿನಲ್ಲೂ ಅಂಥದ್ದೇ ಘಟನೆ ನಡೆದಿದೆ. ಗಂಡನ ಆಸೆಯಂತೆ ಸುಂದರವಾದ ಕೂದಲು ಪಡೆಯಬೇಕೆಂದುಕೊಂಡಿದ್ದ ಪತ್ನಿಗೆ ಬ್ಯೂಟಿ ಪಾರ್ಲರ್ ಶಾಕ್ ನೀಡಿದೆ. ಹೌದು, ಹೈದರಾಬಾದ್‌ನ ಅಬಿಡ್ಸ್‌ನಲ್ಲಿ ನಡೆದಿರುವ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ಸುಂದರವಾಗಿ ಕಾಣಬೇಕೆಂಬ ಮಹಿಳೆಯ ಪ್ರಯತ್ನ ವಿಫಲವಾಗಿದೆ.

ಆಗಿದ್ದೇನು?
ಅಬಿಡ್ಸ್‌ನ ಪ್ರಸಿದ್ಧ ಬ್ಯೂಟಿ ಪಾರ್ಲರ್‌ಗೆ ಹೋದ ಮಹಿಳೆ, ಅಲ್ಲಿದ್ದ ಬ್ಯೂಟಿಷಿಯನ್ ಬಳಿ ತನ್ನ ಉದ್ದನೆಯ ಕೂದಲನ್ನು ಕಟ್ ಮಾಡಿ ಎಣ್ಣೆ ಹಚ್ಚಿ ಸ್ವಲ್ಪ ಟ್ರೆಂಡಿಯಾಗುವಂತೆ ಕೇಳಿಕೊಂಡಿದ್ದಾಳೆ. ಕೂದಲು ಸುಂದರವಾಗಲು ಬ್ಯೂಟಿಷಿಯನ್ ಹೇರ್ ಆಯಿಲ್ ಹಾಕಿದಾಗ ಕೂದಲೆಲ್ಲಾ ಉದುರಿದೆ. ಅವಳ ಕೂದಲು ಉದುರುವುದನ್ನು ನೋಡಿ ಮಹಿಳೆ ಇದ್ದಕ್ಕಿದ್ದಂತೆ ಶಾಕ್ ಆಗಿದ್ದಾಳೆ.

ದಟ್ಟವಾದ ಉದ್ದನೆಯ ಕೂದಲಿನೊಂದಿಗೆ ಬ್ಯೂಟಿಪಾರ್ಲರ್‌ಗೆ ಹೋದ ಹೆಂಡತಿ ಈ ರೀತಿಯ ಕೂದಲಿನೊಂದಿಗೆ ಹಿಂತಿರುಗಿದಾಗ ಪತಿ ಕೂಡ ಶಾಕ್ ಆಗಿದ್ದಾನೆ. ಏನಾಯಿತು ಎಂದು ಕೇಳಿದಾಗ ಸತ್ಯ ತಿಳಿದ ಪತಿ ಬ್ಯೂಟಿ ಪಾರ್ಲರ್‌ಗೆ ತೆರಳಿದ್ದಾನೆ. ಪತಿ-ಪತ್ನಿಯ ನಡುವೆ ಜಗಳವೂ ನಡೆದಿದೆ. ಪತ್ನಿಗೆ ತೀವ್ರ ನೋವಾಗಿ, ಏನು ಮಾಡಬೇಕೆಂದು ತೋಚದೆ ಉದುರುತ್ತಿದ್ದ ಕೂದಲು ಹಿಡಿದುಕೊಂಡು ಬ್ಯೂಟಿಪಾರ್ಲರ್ ನಿರ್ಲಕ್ಷ್ಯದಿಂದ ಕೂದಲು ಉದುರಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಬಳಸಿದ ಉತ್ಪನ್ನಗಳ ಬಗ್ಗೆ ದೂರುಗಳು ಬಂದಿವೆಯೇ ಎಂಬ ಬಗ್ಗೆ ಬ್ಯೂಟಿ ಪಾರ್ಲರ್ ನಿರ್ವಾಹಕರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ನಕಲಿ ಉತ್ಪನ್ನಗಳ ಬಳಕೆ ಮತ್ತು ಅನಾನುಭವಿ ಬ್ಯೂಟಿಷಿಯನ್​​ಗಳಿಂದ ಇಂತಹ ಘಟನೆಗಳು ನಡೆಯುತ್ತಲೇ ಇವೆ.