ನ್ಯೂಸ್

ಬಿಬಿಎಂಪಿ : ಮಕ್ಕಳ ತಜ್ಞ ಹುದ್ದೆಗೆ ವೇತನ ಎಷ್ಟಿರುತ್ತದೆ?

sspmiracle1982

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ವೈದ್ಯಕೀಯ ವಿಭಾಗದ ಅಡಿ ಕೆಲವು ಆಯ್ದ ಆಸ್ಪತ್ರೆಗಳಿಗೆ 6 ಪ್ಯಾನಲ್ ಮಕ್ಕಳ ತಜ್ಞರುಗಳ ಹುದ್ದೆಗೆ ನೇರ ಸಂದರ್ಶನ ಕರೆಯಲಾಗಿದೆ.

ಒಟ್ಟು 6 ಮಕ್ಕಳ ತಜ್ಞ ಹುದ್ದೆಗೆ ಈ ನೇರ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಎಂಡಿ (ಪೀಡಿಯಾಟ್ರಿಕ್ಸ್)/ ಡಿಸಿಎಚ್ ಪಾಸಾಗಿರಬೇಕು. 50 ವರ್ಷ ವಯೋಮಿತಿಯೊಳಗಿರಬೇಕು. ಕರ್ನಾಟಕ ಮೆಡಿಕಲ್ ಕೌನ್ಸಿಲ್​​ನಲ್ಲಿ ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯನ್ನು ನೋಂದಣಿ ಮಾಡಿಸಿರಬೇಕು.

ವೇತನ 1,10,000 ರೂ. ಇರುತ್ತದೆ. ಗುತ್ತಿಗೆ ಅವಧಿ ಒಂದು ವರ್ಷ. ಜುಲೈ 29 ರಂದು ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ಸಭಾಂಗಣ, ದಾಸಪ್ಪ ಆಸ್ಪತ್ರೆ ಆವರಣ, 2ನೇ ಮಹಡಿ, ಎಸ್​ಜೆಪಿ ರಸ್ತೆ, ಬೆಂಗಳೂರು- ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ತಮ್ಮ ಬಯೋಡೇಟಾ, ವಿದ್ಯಾರ್ಹತೆಯ ಎಲ್ಲ ವರ್ಷದ ಅಂಕಪಟ್ಟಿ, ಪದವಿ ಪ್ರಮಾಣಪತ್ರದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ 080- 22112019 ಸಂಪರ್ಕಿಸಬಹುದು.