ಬೆಂಗಳೂರು: ಕಳೆದ ಭಾನುವಾರದ ಸಂಚಿಕೆಯಲ್ಲಿ ತಮಾಷೆ, ಮೋಜು-ಮಸ್ತಿಗೆ ಹೆಚ್ಚು ಸಮಯ ಕೊಟ್ಟ ಸುದೀಪ್, ಧನರಾಜ್-ಮಂಜು ಕಾಂಬಿನೇಷನ್ನಲ್ಲಿ ಹಾಸ್ಯ ಅರಳಿಸಿ, ವೀಕ್ಷಕರಲ್ಲಿ ಮೊದಲು ನಗೆ ತರಿಸಿದರು. ಈ ನಗುವಿನ ಸಿಹಿಯ ಜತೆಗೆ ಸಂಚಿಕೆಯ ಕಡೆಯಲ್ಲಿ ಕಹಿ ಉಣಿಸಿದ ಕಿಚ್ಚ, ಅನುಷಾ ರೈ ಮತ್ತು ಮಾನಸಾ ಪೈಕಿ ಮಾನಸಾ ಎಲಿಮಿನೇಟ್ ಆಗಿದ್ದೀರಾ ಎಂದು ಹೇಳಿದರು. ಸದ್ಯ ಐದನೇ ವಾರಕ್ಕೆ ಬಿಗ್ ಬಾಸ್ (BBKS11) ಹೌಸ್ನಿಂದ ಹೊರಬಂದ ಮಾನಸಾ 'ವಿಜಯವಾಣಿ' ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿ, ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ಮೊದಲು ಬೇಸರ ವ್ಯಕ್ತಪಡಿಸಿದ ಮಾನಸಾ, ಬಿಗ್ ಮನೆಯಲ್ಲಿ ಲಾಯರ್ ಜಗದೀಶ್ ಆಟದ ವೈಖರಿ ಮತ್ತು ಅವರು ಮನೆಯಿಂದ ಎಲಿಮಿನೇಟ್ ಆಗುವ ದಿನ ನಡೆದ ಘಟನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. "ಅವರೇ ಹೇಳಿದ ರೀತಿ ಅವರು ಏಕೆ ಜೋರಾಗಿ ಮಾತನಾಡುತ್ತಿದ್ದರು ಎಂದು ಕಾರಣ ನೀಡಿದ್ದಾರಾ? ನಮಗೂ ಅವರಂತೆಯೇ ಕೆಲವು ವಿಚಾರಗಳಿಗೆ ಬಹಳ ಬೇಸರ ಮೂಡಿತ್ತು. ಹಂಸಾ ಅವರಿಗೆ ಕೆಟ್ಟದಾಗಿ ಬೈದಿದ್ದರು. ನನಗೂ ಕೆಲವು ಮಾತುಗಳನ್ನು ಆಡಿದ್ದರು. ಅದರಲ್ಲಿ ಎಷ್ಟು ತೋರಿಸಲಾಗಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ" ಎಂದರು.
"ಸುದೀಪ್ ಸರ್ ಹೇಳುವ ಹಾಗೆ ವಿಚಾರಗಳು ಅಂತ ಬಂದಾಗ ಮನೆಯಲ್ಲಿ ಹಂಸಾ ಅವರನ್ನು ನನ್ನ ಅಕ್ಕ ಎಂದು ನೋಡಿರುತ್ತೇನೆ. ಅವರಿಗೆ ಅಂದ ಮಾತು ನನಗೂ ಅನಿಸುತ್ತೆ..." ಇನ್ನು ಹೆಚ್ಚಿನ ವಿಚಾರಕ್ಕೆ ಈ ಕೆಳಗೆ ನೀಡಿರುವ ಸಂದರ್ಶನ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಿ.