ನ್ಯೂಸ್

BBKS10: ‘ಏನೋ ಗಂಡಸುತನ, ಏನ್ ಮಾಡಿದ್ಯಾ ಈ ಮನೆಗೆ ಬಂದು?; ಕಾರ್ತಿಕ್​ನ ಹೀನಾಮಾನವಾಗಿ ನಿಂದಿಸಿದ ಸ್ನೇಹಿತ್​

ಮೋಹನ್​ ಶೆಟ್ಟಿ

ಬೆಂಗಳೂರು: ಇಂದಿನ ಸಂಚಿಕೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್​ ವಿರುದ್ಧ ಮನೆಮಂದಿ ರೊಚ್ಚಿಗೆದ್ದಿದ್ದು, ವ್ಯಕ್ತಿತ್ವವನ್ನು ಮಾತಿನಲ್ಲೇ ಚಿಂದಿ ಮಾಡಿದ್ದಾರೆ. ಮೌನವಾಗಿ ಚೇರಿನಲ್ಲಿ ಕುಳಿತಿರುವ ಕಾರ್ತಿಕ್​ ಮತ್ತು ಸಂಗೀತಾ ಎಷ್ಟೇ ನೋವಾಗುವಂತ, ಪ್ರಚೋದನಕಾರಿ ಮಾತುಗಳು ಕಿವಿಗೆ ಬಿದ್ದರೂ ಸಹ ಕಿಂಚಿತ್ತು ಸ್ಪಂದಿಸದೆ ಎದುರಿಸುತ್ತಿರುವುದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಮನೆಯ ಸ್ಪರ್ಧಿಗಳಾದ ವಿನಯ್​, ನಮ್ರತಾ ಮತ್ತು ಸ್ನೇಹಿತ್​ ಕಾರ್ತಿಕ್​ಗೆ ಹೀನಾಮಾನವಾಗಿ ನಿಂದಿಸಿದ್ದಾರೆ.

ವಿನಯ್​ ಮತ್ತು ನಮ್ರತಾ ಪೈಕಿ ಸ್ನೇಹಿತ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕಾರ್ತಿಕ್ ಗಂಡಸುತನದ ಬಗ್ಗೆಯೂ ಮಾತಾಡಿದ್ದಾರೆ.

‘ಏನೋ ಗಂಡಸುತನ, ಏನ್ ಮಾಡಿದೀಯಾ ಈ ಮನೆಗೆ ಬಂದು? ಮನೇಗ್ ಹೋಗಿ, ಸ್ಲೋ ಮೋಷನ್‌ನಲ್ಲಿ ನಿನ್ನ ನಾನು ಕುಸ್ತಿಯ ಅಖಾಡದಲ್ಲಿ ಹೊರಗೆ ಹಾಕಿದ್ದನ್ನು ನೋಡು, ಆಗ ಗೊತ್ತಾಗತ್ತೆ.

ಇಲ್ಯಾವಳೋ ಕ್ರಶ್ ಅಂತೆ. ಇದ್ಯಾವ್ದೋ ಕ್ರಾಶ್ ಆದವಳ ಜತೆ ಓಡಾಡ್ತೀಯಾ? ಅಲ್ಲೇನ್ ನನ್ ಕಾಲ್ ನೋಡ್ತೀಯಾ? ನಿನ್ ಪೊಸಿಷನ್ ಇರೋದೂ ಅಲ್ಲೇ’ ಎಂದು ಸಿನಿಮೀಯ ಶೈಲಿಯಲ್ಲಿ ಕಾರ್ತಿಕ್‌ ಅವರನ್ನು ಹೀನಾಮಾನವಾಗಿ ನಿಂದಿಸಿದ್ದಾರೆ.

ಸಣ್ಣದೊಂದು ಅಡ್ಡಮಾತು ಬಂದರೂ ಸಿಟ್ಟಿಗೆದ್ದು ಕಿರುಚಾಡುತ್ತಿದ್ದ ಕಾರ್ತಿಕ್ ಹಾಗೂ ಒಂದೇ ಒಂದು ತಪ್ಪು ಮಾತಿಗೆ ಸಿಡಿದೇಳುವ ಸಂಗೀತಾ ಇಬ್ಬರೂ ಈ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಗಪ್​ಚುಪ್​ ಆಗಿ ಕುಳಿತ್ತಿದ್ದಾರೆ. ಅಷ್ಟಕ್ಕೂ ಏನಾಗುತ್ತಿದೆ ಈ ಬಿಗ್‌ಬಾಸ್‌ ಮನೆಯಲ್ಲಿ, ಸಂಗೀತಾ-ಕಾರ್ತಿಕ್ ನಡುವೆ ನಡೆದಿದ್ದೇನು? ಇದೇನು ಹೊಸ ಟಾಸ್ಕಾ ಅಥವಾ ಪನಿಷ್‌ಮೆಂಟಾ? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.