ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸರ್ಧಿಗಳು ಇದೀಗ 11ನೇ ವಾರಾಂತ್ಯಕ್ಕೆ ಬಂದು ನಿಂತಿದ್ದು, ಶನಿವಾರ ನಡೆಯುವ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ಸಜ್ಜಾಗಿದ್ದರು. ಆದ್ರೆ, ಈ ವೇಳೆ ಸದಸ್ಯರ ಮುಂದೆ ದಿಢೀರ್ ಹಾಜರಾದ ಸುದೀಪ್, ಸ್ಪರ್ಧಿಗಳು ತೋರಿದ ಬೇಜವಾಬ್ದಾರಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿವಾರವೂ ತಮ್ಮ ಕಿಚ್ಚನ ಪಂಚಾಯತಿ ಕಟ್ಟೆಯಲ್ಲಿ ಸಂಚಿಕೆ ಪ್ರಾರಂಭಗೊಂಡ ಕೆಲ ಸಮಯದ ಬಳಿಕ ಸ್ಪರ್ಧಿಗಳು ವಾರವಿಡೀ ಮಾಡಿರುವ ತಪ್ಪುಗಳನ್ನು ಹೇಳಿ, ಕ್ಲಾಸ್ ತೆಗೆದುಕೊಳ್ಳುವ ಸುದೀಪ್, ಈ ಬಾರಿ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯ ಆರಂಭದಲ್ಲೇ ಮನೆಯ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ.
ಬಜರ್ ಆದಾಗಲಿನಿಂದಲೂ ನೋಡುತ್ತಲೇ ಇದ್ದೀನಿ, ಯಾರಿಗೂ ಸೀರಿಯಸ್ನೆಸ್ ಇಲ್ಲ ಅಂತ ಅನಿಸುತ್ತಿದೆ ಎಂದು ಗರಂ ಆದ ಸುದೀಪ್, ಪ್ರತಾಪ್ ನಿಮ್ಮ ಮೈಕ್ ಎಲ್ಲಿ? ಎಂದರು. ಮೈಕಲ್ ಹಾಗೂ ವಿನಯ್ ಅವರಿಗೂ ಕ್ಲಾಸ್ ತೆಗೆದುಕೊಂಡ ಕಿಚ್ಚ, ಈಗಲೇ ಮುಖ್ಯದ್ವಾರ ತೆಗೆಸುತ್ತೀನಿ ಗೆಟ್ಔಟ್ ಎಂದು ಖಡಕ್ ಆಗಿ ಹೇಳಿದ್ದಾರೆ.