ನ್ಯೂಸ್

BBKS10: ಸಿರಿ ಪ್ರಕಾರ ಸೀಸನ್​ 10ರ ವಿನ್ನರ್​ ಇವರೇ ನೋಡಿ!

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಸಿರಿ ಅವರನ್ನು ಹೊರತುಪಡಿಸಿ ಉಳಿದ ಸದಸ್ಯರು ಹೊಸ ವರ್ಷದ ಸಂಭ್ರಮವನ್ನು ಮನೆಯೊಳಗೆ ಆಚರಿಸಿದ್ದಾರೆ. ಈ ವಾರ ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದ ಸಿರಿ, ತಮ್ಮ ಬಿಗ್ ಬಾಸ್​ ಪಯಣ ಹೇಗಿತ್ತು? ತಿಳಿಸದ ಅನುಭವಗಳು ಹಾಗೂ ಕೆಲವು ಕುತೂಹಲಕಾರಿ ಸಂಗತಿಗಳನ್ನು ವೀಕ್ಷಕರ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆ ಪೈಕಿ ಯಾರು ಈ ಸೀಸನ್ ವಿನ್ನರ್ ಆಗಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ.

ಹಿಂದಿನ ವಾರಗಳಲ್ಲಿ ನಾನು ನಾಮಿನೇಷನ್‌ ಪಟ್ಟಿಯಲ್ಲಿದ್ದಾಗ, ‘ಈ ಸಲ ನಾನು ಹೋಗ್ತೀನಿ’ ಎಂದು ಹೇಳಿಲ್ಲ. ‘ಹೋದ್ರೆ ಇಟ್ಸ್‌ ಓಕೆ’ ಅನ್ನುವ ರೀತಿಯಲ್ಲಿಯೇ ಇದ್ದೆ. ಈ ಸಲ ಹೊರಗೆ ಬಂದೆ. ನನ್ನಂಥ ವ್ಯಕ್ತಿತ್ವದವಳಿಗೆ ಇದೇನೂ ಸಣ್ಣ ಜರ್ನಿಯಲ್ಲ. ನಿರೀಕ್ಷೆ ಇರಲಿಲ್ಲ. ಒಪ್ಪಿಕೊಂಡಿದ್ದೇನೆ ಅಷ್ಟೆ ಎಂದಿದ್ದಾರೆ ಸಿರಿ.

"ಎಲ್ಲರ ಮನಸ್ಸನ್ನೂ ನಾನು ಗೆದ್ದಿದೀನಿ ಅಂದ್ಕೊಂಡಿದೀನಿ. ಯಾರ ಮನಸ್ಸನ್ನು ನೋವಾದಾಗ, ಸಮಾಧಾನ ಮಾಡಿದೀನಲ್ಲಾ, ಅವರೆಲ್ಲರೂ ನನಗೆ ಅಕ್ಕನ ಸ್ಥಾನ ಕೊಟ್ಟಿದಾರೆ. ಅದರ ಬಗ್ಗೆ ಖುಷಿಯಿದೆ. ಕ್ಯಾಪ್ಟನ್ಸಿ ಟಾಸ್ಕ್‌ ಕನಸು! ಈ ಟಾಸ್ಕ್‌ಗೆ ನಾನು ಬಹಳ ಹತ್ತಿರ ಹೋಗಿದ್ದೆ. ಎರಡು ಸಲ ಹೋಗಿದ್ದೆ. ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಕ್ಯಾಪ್ಟನ್ ಬೆಡ್ ಮೇಲೆ ಮಲಗುವ ಅವಕಾಶ ಸಿಗಲಿಲ್ಲ. ಆದರೆ ಕ್ಯಾಪ್ಟನ್‌ಗೆ ಸಿಗುವ ಸೌಲಭ್ಯಗಳನ್ನೆಲ್ಲ ಕಳೆದ ವಾರಗಳಲ್ಲಿ ನಾನು ತೆಗೆದುಕೊಂಡಿದೀನಿ" ಎಂದರು.

"ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್‌ ಅನಿಸುವುದು ಕಾರ್ತಿಕ್‌. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡ್ತಿದ್ದಾರೆ. ನನ್ನ ಪ್ರಕಾರ ಈ ಸೀಸನ್​ ಸಂಗೀತಾ ಗೆಲ್ಲಬೇಕು. ಆದ್ರೆ, ಕಾರ್ತಿಕ್ ಗೆಲ್ತಾರೆ ಅನಿಸುತ್ತೆ. ಮನೆಯಲ್ಲಿ ಫೇಕ್‌ ಅಂತ ನಾನು ಹೇಳೋದಿಲ್ಲ. ಆದರೆ ಆಟಕ್ಕೆ ಏನು ಬೇಕೋ, ಹೇಗೆ ಬೇಕೋ ಹಾಗೆ ತಿರುಗೋದು ಅಂದ್ರೆ ಅದು ತುಕಾಲಿ ಸಂತೋಷ್‌. ಮುಂದಿನ ವಾರ ಡೇಂಜರ್‍ ಝೋನ್‌ನಲ್ಲಿ ಮೈಕಲ್ ಇರ್ತಾರೆ ಅಂದ್ಕೊತೀನಿ" ಎಂದು ಸಿರಿ ಹೇಳಿದ್ದಾರೆ.

ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.