ನ್ಯೂಸ್

BBKS10: ನಟಿ ತಾರಾ ಮುಂದೆ ಕಣ್ಣೀರಿಟ್ಟ ಪ್ರತಾಪ್​!

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಎರಡನೇ ಪಂಚಾಯಿತಿ ಕಟ್ಟೆಯು ಯಶಸ್ವಿಯಾಗಿ ಮುಗಿದಿದ್ದು, ಮನೆಯಿಂದ ಗೌರೀಶ್​ ಅಕ್ಕಿ ಎಲಿಮಿನೇಟ್​ ಆಗಿ ಹೊರ ಹೋದರು. ಮುಂದಿನ ವಾರಕ್ಕೆ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್​, ಸ್ಪರ್ಧಿಗಳಿಗೆ ಟಾಸ್ಕ್​ಗಳನ್ನು ಚೆನ್ನಾಗಿ ಆಡುವಂತೆ ಹೇಳಿದರು. ಈ ಮಧ್ಯೆ ನಾಡಹಬ್ಬ ದಸರಾ ಸಂಭ್ರಮವನ್ನು ಬಿಗ್​ ಬಾಸ್​ ಮನೆಯ ಸದಸ್ಯರೊಂದಿಗೆ ವಿಶೇಷವಾಗಿ ಆಚರಿಸಲು ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಆಗಮಿಸಿದರು.

ಮನೆಯ ಮುಖ್ಯದ್ವಾರದಿಂದ ಆಗಮಿಸಿದ ತಾರಾ ಸದಸ್ಯರೆಲ್ಲರನ್ನೂ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡಿಸಿದರು. ಸ್ಪರ್ಧಿಗಳು ತಾರಾ ಅವರನ್ನು ತಮ್ಮ ಮನೆಗೆ ಸ್ವಾಗತಿಸಿ ಒಂದಷ್ಟು ಸಿಹಿಯನ್ನು ಮಾಡಿ, ಸವಿಯಲು ಕೊಟ್ಟರು. ಹಲವು ಸ್ಪರ್ಧಿಗಳನ್ನು ಕಾಲೆಳೆದ ತಾರಾ, ಮನೆಯವರೊಡನೆ ನಗು ನಗುತ್ತಲೇ ಚರ್ಚೆ ನಡೆಸಿದರು.

ಈ ವೇಳೆ ಮೌನದಿಂದ ಕುಳಿತ್ತಿದ್ದ ಡ್ರೋನ್​ ಪ್ರತಾಪ್ ಅವರನ್ನು ಪ್ರೀತಿಯಿಂದ ಮಾತನಾಡಿಸಿದ ತಾರಾ, ನೀನು ಯಾಕೆ ಹೀಗಿದ್ದೀಯಾ? ಹೊರಗಡೆ ಎಷ್ಟು ನೋವು ಅನುಭವಿಸಿದ್ಯಾ ಅಂತ ಗೊತ್ತಿದೆ. ಯಾಕೆ ಮೌನಿಯಾಗಿದ್ಯಾ? ಈ ಬಿಗ್ ಬಾಸ್ ಮನೆ ನಿನಗೆ​ ದೊಡ್ಡ ವೇದಿಕೆ, ಇಲ್ಲಿ ಏನೇ ಇದ್ದರೂ ಹಂಚಿಕೋ ಇದಕ್ಕಿಂತ ಬೇರೆ ಜಾಗ ಬೇಕಾ? ಎಲ್ಲರೊಂದಿಗೂ ಬೆರೆಯಬೇಕು, ಹೆಚ್ಚಿಗೆ ಮಾತನಾಡು ಎಂದು ಹೇಳಿದರು.

ತಾರಾ ಅವರ ಮಾತಿಗೆ ಮೌನದಿಂದಲೇ ಕುಳಿತ್ತಿದ್ದ ಪ್ರತಾಪ್​ ದುಃಖದಿಂದ ಕಣ್ಣೀರಿಟ್ಟರು. ನೀನು ಅಳಬೇಡ ಏನೇ ಇದ್ದರೂ ಹೇಳಿಕೋ, ನಿನ್ನ ಸಂಸ್ಥೆ ಚೆನ್ನಾಗಿ ನಡೆಸು, ನಿನ್ನ ಮನೆಗೆ ನಾನು ಬರುತ್ತೀನಿ, ಊಟ ಹಾಕಿಸು ಎಂದು ಹೇಳಿದರು. ಇದಕ್ಕೆ ಖಂಡಿತ ಎಂದು ಪ್ರತಾಪ್​ ಉತ್ತರಿಸಿದರು.