More

    ಆಫ್ಘನ್ ಯಶಸ್ಸಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಕಾರಣ ಎಂದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್

    ಚೆನ್ನೈ: ಅ್ಘಾನಿಸ್ತಾನ ತಂಡ 10 ದಿನದ ಅಂತರದಲ್ಲಿ ಟೂರ್ನಿಯ ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡಗಳಿಗೆ ಆಘಾತ ನೀಡಿದೆ. ಈ ಗೆಲುವಿನ ಹಿಂದೆ ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ಅವರ ಪಾತ್ರ ಪ್ರಮುಖವಾಗಿದ್ದು, ಇದನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಗುರುತಿಸಿದ್ದಾರೆ. ‘ವಿಶ್ವಕಪ್‌ನಲ್ಲಿ ಅ್ಘಾನಿಸ್ತಾನ ಪ್ರದರ್ಶನ ಯಾವುದಕ್ಕೂ ಕಡಿಮೆಯಿಲ್ಲ. ಬ್ಯಾಟಿಂಗ್ ವಿಭಾಗದ ಶಿಸ್ತು, ಮನೋಧರ್ಮ ಹಾಗೂ ವಿಕೆಟ್ ನಡುವಿನ ಓಟದ ಪರಿಶ್ರಮಗಳೆಲ್ಲವೂ ಅಜಯ್ ಜಡೇಜಾ ಅವರ ಪ್ರಭಾವದಿಂದ ಆಗಿರಬಹುದು’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ಅಜಯ್ ಜಡೇಜಾ ಆ್ಘನ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದರು. 1996ರ ವಿಶ್ವಕಪ್ ಕಾರ್ಟರ್‌ೈನಲ್‌ನಲ್ಲಿಯೂ ಅಜಯ್ ಜಡೇಜಾ ಪಾಕ್ ತಂಡವನ್ನು ಕಾಡಿದ್ದರು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಜಯ್ ಜಡೇಜಾ 25 ಎಸೆತಗಳಲ್ಲಿ 45 ರನ್ ಬಾರಿಸಿ ಸವಾಲಿನ ಮೊತ್ತ ಪೇರಿಸಲು ನೆರವಾಗಿದ್ದರು. ಬಳಿಕ ಬೌಲಿಂಗ್‌ನಲ್ಲಿಯೂ 5 ಓವರ್ ಎಸೆದು 19 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. 1999ರ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಗೆದ್ದ ಪಂದ್ಯದಲ್ಲೂ ಅಜಯ್ ಭಾರತ ತಂಡದಲ್ಲಿದ್ದರು. ಹೀಗಾಗಿ ‘ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಜಯ್ ಜಡೇಜಾ ಅಜೇಯರಾಗಿ ಮುಂದುವರಿದಿದ್ದಾರೆ’ ಎಂದು ಕ್ರಿಕೆಟ್ ಪ್ರೇಮಿಗಳು ಬಣ್ಣಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts