ನ್ಯೂಸ್

BBKS10: 'ನನ್ನ ಪ್ರಕಾರ ಈ ಐವರು ಟಾಪ್ 5 ಫೈನಲಿಸ್ಟ್​ ಆಗಿರುತ್ತಾರೆ': ಹೊರಬಂದ ಪವಿ ಹೇಳಿದ್ದಿಷ್ಟು!

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಹತ್ತನೇ ವಾರದ ಅಂತ್ಯದಲ್ಲಿ ಮನೆಯಿಂದ ಹೊರಬಂದ ವೈಲ್ಡ್​ಕಾರ್ಡ್​ ಸ್ಪರ್ಧಿ ಪವಿ ಪೂವಯ್ಯ, ಮನೆಯೊಳಗಿನ ಅನುಭವ ಹಾಗೂ ಹಲವು ಕುತೂಹಲಕಾರಿ ವಿಚಾರಗಳನ್ನು ವೀಕ್ಷಕರ ಮುಂದೆ ಬಹಿರಂಗಪಡಿಸಿದ್ದಾರೆ. ಈ ವೇಳೆ ತಮ್ಮ ಪ್ರಕಾರ ಟಾಪ್​ 5ರಲ್ಲಿ ಇವರು ಇರುತ್ತಾರೆ ಎಂದು ಹೆಸರಿಸಿದ ಪವಿ, ಯಾರ ಬಗ್ಗೆ ಹೇಳಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..

"ನನಗೆ ಟಾಪ್‌ 5ನಲ್ಲಿ ಇರಬೇಕಾದ ಸ್ಪರ್ಧಿಗಳು ಅಂತಿರುವುದು, ಕಾರ್ತಿಕ್, ವಿನಯ್, ನಮ್ರತಾ, ಸಂಗೀತಾ, ತುಕಾಲಿ ಸಂತೋಷ್ ಇರಬೇಕು ಎಂದಿತ್ತು. ಆದರೆ ಈಗ ಆಡುತ್ತಿರುವ ರೀತಿ ನೋಡಿದರೆ ನನಗೆ ಅನುಮಾನ. ಮುಂದೆ ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ. ಕಾರ್ತಿಕ್ ವಿನ್ನರ್ ಆಗಬಹುದು ಅನಿಸುತ್ತಿದೆ. ವಿನಯ್ ಮತ್ತು ನಮ್ರತಾ ನನ್ನ ಫ್ರೆಂಡ್ ಆಗಿದ್ದರೂ, ಕಾರ್ತಿಕ್ ಏನೋ ಪಾಸಿಟಿವ್ ವೈಬ್ ಕೊಡ್ತಾರೆ" ಎಂದು ಪವಿ ಹೇಳಿದರು.

"ಬಹುಶಃ ನೋಡುವವರಿಗೂ ಹಾಗೆಯೇ ಅನಿಸಬಹುದು. ಎಷ್ಟೇ ಚೆನ್ನಾಗಿ ಆಡಿದರೂ, ಅಗ್ರೆಸಿವ್ ಆಗಿ ಆಡಿದರೂ ಕುಟುಂಬಕ್ಕೆ ಹೋಲುತ್ತಾರೆ. ಆದರೆ ವಿನಯ್‌ ಅವರನ್ನು ಎಲ್ಲರೂ ಅಗ್ರೆಸಿವ್ ಆಗುತ್ತಾರೆ ಎಂದು ಹೇಳ್ತಾರೆ. ಆದರೆ ಅವರು ಹಾಗಿಲ್ಲ. ನಾವು ಮನೆಯೊಳಗೆ ಹೋಗುವಾಗ ನಮಗೊಂದು ವಿಶೇಷ ಅಧಿಕಾರ ಸಿಕ್ಕಿತ್ತು" ಎಂದರು.

"ಯಾರನ್ನಾದರೂ ಸೇವ್ ಮಾಡಬಹುದು ಎಂದು. ಆಗ ನಾವು ಸಿರಿ ಮತ್ತು ತುಕಾಲಿ ಅವರನ್ನು ಸೇವ್ ಮಾಡಿದ್ವಿ. ನಾವು ಮಾಡಿರುವ ಮೊದಲ ತಪ್ಪು ಅದು. ಅವರನ್ನು ಸೇವ್ ಮಾಡಿರದಿದ್ದರೆ ಅವರು ಈ ಜಾಗದಲ್ಲಿ ಇರುತ್ತಿದ್ದರು. ನಾವು ಮಾಡಿದ ಮೊದಲ ತಪ್ಪೇ ಅದು" ಎಂದು ಬೇಸರದಿಂದ ಹೇಳಿದ್ದಾರೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.