ನ್ಯೂಸ್

ಈ ವಾರ Bigg Boss ಮನೆಯ ಕ್ಯಾಪ್ಟನ್​​ ಆಗಿದ್ದು ಇವರೇ ನೋಡಿ; ಎಂಟ್ರಿ ಕೊಟ್ಟ ವಾರವೇ ಕಳಪೆ ಪಡೆದು ಜೈಲಿಗೆ ಹೋದವರು ಮಾತ್ರ...

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ ಆವೃತ್ತಿ (Bigg Boss 11th Season) ಆರಂಭವಾಗಿ ಏಳು ವಾರಗಳು ಕಳೆದಿದ್ದು, ವಿವಾದಾತ್ಮಕ ಅಂಶಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ ಪ್ರೇಕ್ಷಕರು ನಿರೀಕ್ಷೆ ಮಾಡದಿರುವ ಟ್ವಿಸ್ಟ್​ಗಳನ್ನು ನೀಡುತ್ತಿದ್ದು, ಈ ವಾರ ಮನೆಯ ಕ್ಯಾಪ್ಟನ್​ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಈ ವಾರದ ಕ್ಯಾಪ್ಟನ್ ಯಾರು ಅನ್ನೋ ರೇಸ್‌ನಲ್ಲಿ ಮಂಜು ಅವರು ಗೆಲುವು ಸಾಧಿಸಿದ್ದಾರೆ. ಈ ವಾರದ ಟಾಸ್ಕ್‌ ಹಾಗೂ ಮನೆಯವರ ಜೊತೆ ನಡೆದ ಮಾತುಕತೆಯಲ್ಲಿ ಮಂಜು ಅವರು ಎಲ್ಲರ ಮನಗೆದ್ದಿದ್ದಾರೆ. ಅಚ್ಚರಿ ಎಂಬಂತೆ ಮಂಜು ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.  ಕಳಪೆ ಪಟ್ಟ ರಜತ್​ಗೆ ದೊರೆತಿದೆ.

ಬಿಗ್​ಬಾಸ್ ಮನೆಯಲ್ಲಿ ಈ ವಾರದ ಕಳಪೆ ಯಾರಿಗೆ ಅನ್ನೋದು ಈಗಾಗಲೇ ರಿವೀಲ್ ಆಗಿದೆ. ವೈಲ್ಡ್ ಕಾರ್ಡ್‌ನಲ್ಲಿ ಎಂಟ್ರಿಯಾದ ರಜತ್  ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು ಕಳಪೆ ಪಟ್ಟ ಪಡೆದು ಜೈಲು ಪಾಲಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಕಳಪೆ ಪಟ್ಟ ರಜತ್ ಅವರಿಗೆ ಸಿಕ್ಕಿದೆ.

ಮನೆಗೆ ಬಂದ ಹೊಸದರಲ್ಲಿ ರಜತ್​ ಆಡಿದ್ದ ಮಾತು ಬಿಗ್​ಬಾಸ್​ನಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಇದೇ ಕಾರಣಕ್ಕೆ ಗೋಲ್ಡ್ ಸುರೇಶ್ ಹಾಗೂ ರಜತ್ ಮಧ್ಯೆ ಜಗಳ ನಡೆದಿತ್ತು. ಕಳಪೆ ನೀಡುವ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಅವರ ಮಾತಿಗೆ ಮನೆಯವರೆಲ್ಲಾ ದನಿಗೂಡಿಸಿದ್ದಾರೆ. ಎಲ್ಲರ ವೋಟಿಂಗ್ ಆಧಾರದಲ್ಲಿ ರಜತ್ ಅವರು ಕಳಪೆ ಪಟ್ಟವನ್ನು ಅಲಂಕರಿಸಿದ್ದಾರೆ.