ನ್ಯೂಸ್

BBK11: ಫಿನಾಲೆಯ ಕೊನೆಯಲ್ಲಿ ಈ ಮೂವರ ಮಧ್ಯೆ ಟ್ರೋಫಿ ಸೆಣಸಾಟ! ಯಾರ ಮುಡಿಗೆ ಸೀಸನ್ 11ರ ಕಿರೀಟ?

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್​ ಕನ್ನಡ ಸೀಸನ್​ 11ರ ಸ್ಪರ್ಧಿಗಳು ಇದೀಗ ಯಶಸ್ವಿ 15 ವಾರಗಳನ್ನು ಪೂರೈಸಿ, 16ನೇ ವಾರ ಹಾಗೂ ಕೊನೆಯ ವಾರದ ಗೆಲುವಿನ ಓಟದಲ್ಲಿದ್ದಾರೆ. ಆರಂಭಿಕದ ಮೊದಲೆರೆಡು ವಾರಗಳಲ್ಲೇ ದೊಡ್ಡ ವಿವಾದಕ್ಕೆ ಮತ್ತು ಜಟಾಪಟಿಗೆ ಕಾರಣವಾಗಿದ್ದ ಬಿಗ್ ಬಾಸ್​ ಸೀನಸ್​ 11 ಇದೀಗ ಕಟ್ಟ ಕಡೆಯ ಹಂತವನ್ನು ತಲುಪಿದ್ದು, ಗ್ರ್ಯಾಂಡ್​ ಫಿನಾಲೆಗೆ ಇನ್ನೆರೆಡು ದಿನಗಳಷ್ಟೇ ಬಾಕಿ ಉಳಿದಿದೆ. ಪ್ರೀತಿ-ಸಂಬಂಧ, ದೋಸ್ತಾ, ಜಗಳ, ಮನಸ್ತಾಪಗಳ ನಡುವೆ 20 ಘಟಾನುಘಟಿ ಸ್ಪರ್ಧಿಗಳ ಪೈಕಿ ಸದ್ಯ ಮನೆಯೊಳಗೆ ಉಳಿದುಕೊಂಡಿರುವುದು ಕೇವಲ 6 ಸದಸ್ಯರು ಮಾತ್ರ. ಇವರಲ್ಲಿ ಫಿನಾಲೆ ಕಪ್​ ಗೆಲ್ಲುವುದು ಒಬ್ಬರೇ ಆಗಿದ್ದು, ಅದು ಯಾರ ಮುಡಿಗೆ ಎಂಬುದೇ ಈಗ ಕುತೂಹಲ.

ಹನುಮಂತು, ಮಂಜು...

ಬಿರುಸಿನ ಪೈಪೋಟಿ, ಜಟಾಪಟಿ, ಮಾತಿನ ಕಿಡಿ ಮಧ್ಯೆಯೇ ಆಟದಲ್ಲಿ ತಮ್ಮ ಬದ್ಧತೆ, ಸ್ಪರ್ಧಾ ಮನೋಭಾವವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದ ಮೋಕ್ಷಿತಾ ಪೈ, ಹನುಮಂತು, ರಜತ್, ಮಂಜು, ಭವ್ಯ ಮತ್ತು ತ್ರಿವಿಕ್ರಮ್​ ಸದ್ಯ ಫಿನಾಲೆ ವಾರದ ಆರು ಸ್ಪರ್ಧಿಗಳಾಗಿ ಅಖಾಡದಲ್ಲಿದ್ದಾರೆ. ಈಗಾಗಲೇ ಕಳೆದ ಭಾನುವಾರದಿಂದಲೇ ಯಾರು ಬಿಗ್ ಬಾಸ್​ ಸೀಸನ್​ 11ರ ಟ್ರೋಫಿಯನ್ನು ಗೆಲ್ಲಲಿದ್ದಾರೆ? ಯಾರ ಮುಡಿಗೆ ರಕ್ಕೆಯ ಟ್ರೋಫಿ ಸೇರಲಿದೆ ಎಂಬ ಕುತೂಹಲ, ಕೌತುಕ ಸದ್ಯ ನೋಡುಗರಲ್ಲಿ ಮನೆ ಮಾಡಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ವ್ಯಾಪಕ ಅಭಿಪ್ರಾಯ, ಅನಿಸಿಕೆಗಳು ವ್ಯಕ್ತವಾಗಿದ್ದು, ಹನುಮಂತು, ಮಂಜು, ತ್ರಿವಿಕ್ರಮ್​, ಮೋಕ್ಷಿತಾ ಮತ್ತು ರಜತ್ ನಡುವೆ ಟ್ರೋಫಿಗಾಗಿ ಭಾರೀ ಪೈಪೋಟಿ ನಡೆಯಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಕೊನೆಯ ಮೂವರು

ಫಿನಾಲೆ ಹಾಟ್​ಸೀಟ್​ನಲ್ಲಿ ಕುಳಿತಿರುವ ಆರು ಘಟಾನುಘಟಿ ಸ್ಪರ್ಧಿಗಳ ಪೈಕಿ ಕಿಚ್ಚ ಸುದೀಪ್ ಅವರ ಎಡ-ಬಲದಲ್ಲಿ ಯಾರಿರುತ್ತಾರೆ ಎಂಬುದು ಈಗಾಗಲೇ ನಿರ್ಧಾರವಾದಂತಿದೆ. ಇದಕ್ಕೆ ಕಾರಣ, ಜನಾಭಿಪ್ರಾಯಗಳು. ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಬಹಿರಂಪಡಿಸಿರುವ ವೀಕ್ಷಕರು, ತ್ರಿವಿಕ್ರಮ್ ಮತ್ತು ಹನುಮಂತು ಸುದೀಪ್ ಅವರ ಅಕ್ಕ-ಪಕ್ಕ ನಿಂತುಕೊಳ್ಳಲಿದ್ದಾರೆ. ಇವರ ಮಧ್ಯೆ ಹುನುಮಂತು ಗೆಲ್ಲಬಹುದು ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗ, ಮೊದಲ ದಿನದಿಂದಲೂ ಮನೆಯೊಳಗೆ ಆಟದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿರುವ ತ್ರಿವಿಕ್ರಮ್,​ ಗೆಲುವು ಸಾಧಿಸುವುದು ಖಚಿತ ಎಂದು ಹೇಳಿದೆ. ಇನ್ನು ಈ ಮಧ್ಯೆ ಇವರೊಂದಿಗೆ ಮೂರನೇ ಸ್ಥಾನದಲ್ಲಿ ಯಾರಿರುತ್ತಾರೆ? ಕೊನೆಯ ಮೂವರು ಸ್ಪರ್ಧಿಗಳು ಯಾರು? ಎಂಬ ಪ್ರಶ್ನೆಗೆ ಮೋಕ್ಷಿತಾ ಹೆಸರು ಉತ್ತರವಾಗಿ ಲಭಿಸಿದೆ.

ಕೊನೆಯ ಮೂವರು ಸ್ಪರ್ಧಿಗಳ ಹೆಸರಿನಲ್ಲಿ ಮೋಕ್ಷಿತಾ ಹೆಸರಿದ್ದು, ಅವರ ಜತೆಗೆ ಮಂಜು ಹೆಸರು ಕೂಡ ಮುಂಚೂಣಿಯಲ್ಲಿದೆ. ಟ್ರೋಫಿಗೆ ಉಳಿಯುವ ಮೂವರಲ್ಲಿ ತ್ರಿವಿಕ್ರಮ್​, ಹನುಮಂತು ಮತ್ತು ಮೋಕ್ಷಿತಾ ಹೆಸರು ಹೆಚ್ಚಾಗಿ ಓಡಾಡುತ್ತಿದೆ. ಅಸಲಿಗೆ ಇವರಲ್ಲಿ ಯಾರು ಆ ಮೂವರು? ಯಾರ ಮುಡಿಗೆ ಬಿಗ್ ಬಾಸ್​ ಸೀಸನ್​ 11ರ ಪಟ್ಟ ಸಿಗಲಿದೆ ಎಂಬುದನ್ನು ಭಾನುವಾರ (ಜ.26) ನಡೆಯಲಿರುವ ಗ್ರ್ಯಾಂಡ್​ ಫಿನಾಲೆಯ ಎರಡನೇ ಸಂಚಿಕೆಯಲ್ಲಿ ತಿಳಿಯಬೇಕಿದೆ.