Heart Attack: ರಾಜ್ಯ ಸೇರಿದಂತೆ ಹಲವೆಡೆ ದಿನೇ ದಿನೇ ಯುವಜನರಲ್ಲಿ ಹೃದಯಾಘಾತ, ಹೃದಯಸ್ತಂಭನ ಪ್ರಕರಣ ಹೆಚ್ಚಾಗುತ್ತಿದೆ. 18ರಿಂದ 40 ವಯೋಮಾನದವರೇ ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಹಾಗೂ ಆಘಾತಕಾರಿ ಸುದ್ದಿ. ಅದರಲ್ಲೂ ಕರ್ನಾಟಕದ ಹಾಸನ ಜಿಲ್ಲೆಯೊಂದರಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ 18 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಶನಿವಾರವೂ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ಯುವಕನೊಬ್ಬ ಹೃದಯಾಘಾತಕ್ಕೆ ಪ್ರಾಣಬಿಟ್ಟ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಪುರಿ ಜಿಲ್ಲಾಧಿಕಾರಿ, SP ವರ್ಗಾವಣೆ, ಇಬ್ಬರು ಪೊಲೀಸರ ಅಮಾನತು| Jagannath Rath Yatra
ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಸಿಕ್ಸ್ ಹೊಡೆದ ಯುವಕ ಕೆಲವೇ ಸೆಕಂಡ್ಗಳಲ್ಲಿ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ನಿಂತ ಜಾಗದಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾನೆ. ಈ ಹೃದಯವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮೃತ ಯುವಕನನ್ನು ಹರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಹರ್ಜೀತ್ ಸಿಂಗ್ ಫಿರೋಜ್‌ಪುರದ ಡಿಎವಿ ಶಾಲಾ ಮೈದಾನದಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಬೌಲರ್ ಎಸೆತಕ್ಕೆ ದೊಡ್ಡ ಸಿಕ್ಸರ್ ಬಾರಿಸಿ ತಂಡಕ್ಕೆ ಸ್ಫೂರ್ತಿ ನೀಡಿದ ಸಿಂಗ್, ಹೃದಯಾಘಾತ ಸಂಭವಿಸಿದ ಕಾರಣ ಪಿಚ್ ಮಧ್ಯದಲ್ಲೇ ಕುಸಿದು, ಮಂಡಿಯೂರಿ ಬಿದ್ದಿದ್ದಾನೆ. ಕೂಡಲೇ ಸ್ಥಳಕ್ಕೆ ಓಡಿ ಬಂದ ಇತರ ಸ್ನೇಹಿತರು, ಸಿಪಿಆರ್ ಮಾಡಿ ಬದುಕಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಪ್ರಯತ್ನಗಳು ವಿಫಲವಾಗಿವೆ,(ಏಜೆನ್ಸೀಸ್).