Indore : ಮಧ್ಯಪ್ರದೇಶದ ಇಂದೋರ್ ರಸ್ತೆಯಲ್ಲಿ ಗುಟ್ಕಾ ಉಗುಳುವುದನ್ನು ಆಕ್ಷೇಪಿಸಿದ ತಿನಿಸು ಅಂಗಡಿ ಮಾಲೀಕನನ್ನು ಇರಿದು ಕೊಲೆ ಮಾಡಿರುವ ಮೂವರು ಆರೋಪಿಗಳನ್ನುಇಂದೋರ್ ಪೊಲೀಸರು ಸೋಮವಾರ (ಆ.11) ಬಂಧಿಸಿದ್ದಾರೆ.
ನಗರದಲ್ಲಿ ಧಾಬಾ ಹೊದಿದ್ದ ಲೇಖ್ರಾಜ್ (25) ಅವರನ್ನು ಭಾನುವಾರ ತಡರಾತ್ರಿ ವಿಜಯನಗರ ರಸ್ತೆಯಲ್ಲಿ ಹತ್ಯೆ ಮಾಡಲಾಗಿದ್ದು, ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೆಚ್ಚುವರಿ ಉಪ ಲೋಕಾಯುಕ್ತ ಅಮರೇಂದ್ರ ಸಿಂಗ್ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: 5 ಬೆಡ್ರೂಮ್ಸ್, ಕಚೇರಿ, ಕ್ಯಾಂಟೀನ್, ಜಿಮ್…ಸಂಸದರ ಹೊಸ ವಸತಿ ಸಂಕೀರ್ಣದಲ್ಲಿದೆ ಈ ಲಕ್ಷುರಿ ವ್ಯವಸ್ಥೆ! Housing Complex
ತನಿಖೆ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಗಳಾದ ರಾಜ್ ಅಹಿರ್ವಾರ್ (19), ಪವನ್ ರಜಕ್ (20), ಹಾಗೂ ಜಗದೀಶ್ ಸಿಸೊಡಿಯ (33) ಅವರನ್ನು ಬಂಧಿಸಿದ್ದಾರೆ.
ಲೇಖರಾಜ್ ತಡರಾತ್ರಿ ಧಾಬಾ ಮುಚ್ಚಿದ ನಂತರ ತನ್ನ ಇಬ್ಬರು ಸ್ನೇಹಿತರೊಂದಿಗೆ ಹಾದುಹೋಗುತ್ತಿದ್ದನು ಈ ವೇಳೆ ಆರೋಪಿಗಳಲ್ಲಿ ಒಬ್ಬ ಮೋಟಾರ್ ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದಾಗ, ರಸ್ತೆಯಲ್ಲಿ ಗುಟ್ಕಾ ಉಗುಳಿದ್ದಾನೆ. ಈ ವೇಳೆ ಲೇಖರಾಜ್ ಆಕ್ಷೇಪ ನಡೆಸಿದ್ದು, ಇವರಿಬ್ಬರು ವಗ್ವಾದಕ್ಕೆ ಕಾರಣವಾಗಿದೆ. ಕೋಪಗೊಂಡ ಆರೋಪಿಗಳು ಲೇಖರಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ಸ್ನೇಹಿತ ಶ್ರೀ ಸಿಂಗ್ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಮೋಟಾರ್ ಸೈಕಲ್ನ್ನು ವಶಕ್ಕೆ ಪಡೆದಿದ್ದು, ಈ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)