ನ್ಯೂಸ್

ಮೊರ್ಬಿ ಆರೋಪಿಗಳ ಪರವಾಗಿ ವಕಾಲತ್ತು ವಹಿಸೋಲ್ಲ; ವಕೀಲರ ಸಂಘದ ಒಮ್ಮತದ ತೀರ್ಮಾನ...

ಮೊರ್ಬಿ: 140ಕ್ಕೂ ಹೆಚ್ಚು ಜನರ ಬಲಿ ಪಡೆದ ಮೊರ್ಬಿ ಸೇತುವೆ ಕುಸಿತದ ಘಟನೆ ಎಲ್ಲರಿಗೂ ಆಘಾತ ನೀಡಿದೆ. ಈ ಹಿನ್ನೆಲೆಯಲ್ಲಿ ಮೊರ್ಬಿ ಜಿಲ್ಲೆಯ ವಕೀಲರ ಸಂಘ, ದುರಂತಕ್ಕೆ ಸಂಬಂಧ ಪಟ್ಟ ಆರೋಪಿಗಳಿಗೆ ಯಾವುದೇ ಸಹಾಯ ಮಾಡಬಾರದು ಎಂದು ತನ್ನ ಸದಸ್ಯರಿಗೆ ಸೂಚಿಸಿದೆ.

ಮೊರ್ಬಿಯ ವಕೀಲರ ಸಂಘ ತಮ್ಮ ನಿರ್ಣಯ ಪತ್ರದಲ್ಲಿ 'ಸಂಘದ ಎಲ್ಲಾ ವಕೀಲರು ಸೇತುವೆ ಕುಸಿದ ಘಟನೆಯಿಂದ ದುಃಖಕ್ಕೆ ಒಳಗಾಗಿದ್ದಾರೆ. ಮೊರ್ಬಿ ಬಾರ್ ಅಸೋಸಿಯೇಷನ್‌ಗೆ ಸಂಬಂಧಿಸಿದ ಯಾವುದೇ ವಕೀಲರು ಘಟನೆಯ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ' ಎಂದು ಘೋಷಿಸಿದ್ದಾರೆ. (ಏಜೆನ್ಸೀಸ್​)