ನ್ಯೂಸ್

ಸಿಎಂ ಸಿದ್ದು ಮಾತಿನ ಎಫೆಕ್ಟ್​! ಸಾಲ ಮರುಪಾವತಿಗಾಗಿ ಧರಣಿ ಕುಳಿತ ಬ್ಯಾಂಕ್​ ಸಿಬ್ಬಂದಿ

ಕೋಲಾರ: ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್​ ಸಿಬ್ಬಂದಿ ಧರಣಿ ಕುಳಿತ ಘಟನೆ ಕೋಲಾರದ‌ ಮಿಲ್ಲತ್ ನಗರದಲ್ಲಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಆಡಿದ ಮಾತು ಇದೀಗ ಬ್ಯಾಂಕ್​ ಸಿಬ್ಬಂದಿಗೆ ಮುಳುವಾಗುತ್ತಿದೆ.

ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಪ್ರಚಾರದ ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರು ಸಾಲ ಮರುಪಾವತಿ ಮಾಡಲು ಒಪ್ಪುತ್ತಿಲ್ಲ. ಕೇಳಲು ಹೋದರೆ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಎಂಬ ಸಬೂಬು ನೀಡುತ್ತಿದ್ದಾರೆ.

ಇತ್ತ ಸಾಲ ವಸೂಲಿಯಾಗದೇ ಬ್ಯಾಂಕ್​ ಸಿಬ್ಬಂದಿ ಕಂಗಾಲಾಗಿದ್ದು, ಹಣ ವಸೂಲಿಗೆ ಪರದಾಡುತ್ತಿದ್ದಾರೆ. ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಿ ಧರಣಿಗೂ ಕುಳಿತಿದ್ದಾರೆ. ಇತ್ತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಸಾಲ ಮನ್ನಾ ಮಾಡುವಂತೆ ಮಹಿಳೆಯರ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)