ನ್ಯೂಸ್

Bangladesh | ಮಾಜಿ ಪ್ರಧಾನಿ ಶೇಖ್​​ ಹಸೀನಾಗೆ ಮತ್ತಷ್ಟು ಸಂಕಷ್ಟ; 5 ಶತಕೋಟಿ ಡಾಲರ್ ದುರುಪಯೋಗದ ತನಿಖೆ ಪ್ರಾರಂಭ

ಢಾಕಾ: ಬಾಂಗ್ಲಾದೇಶದ(Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ನಿರಂತರವಾಗಿ ತನಿಖೆ ಮತ್ತು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈಗ ಭ್ರಷ್ಟಾಚಾರ ವಿರೋಧಿ ಸಮಿತಿಯು ಶೇಖ್ ಹಸೀನಾ ಮತ್ತು ಅವರ ಕುಟುಂಬದ ವಿರುದ್ಧ ರೂಪುರ್ ಪರಮಾಣು ಸ್ಥಾವರದಲ್ಲಿ ಐದು ಶತಕೋಟಿ ಡಾಲರ್‌ಗಳ ದುರುಪಯೋಗದ ಆರೋಪದ ಮೇಲೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶೇಖ್ ಹಸೀನಾ ಮತ್ತು ಆಕೆಯ ಮಗ ಸಜೀಬ್ ವಾಝೇದ್ ಜಾಯ್, ಆಕೆಯ ಸೊಸೆ ಟುಲಿಪ್ ಸಿದ್ದಿಕ್ ಪರಮಾಣು ಸ್ಥಾವರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಹಸೀನಾ ಜತೆಗೆ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಮತ್ತು ಅವರ ಸೊಸೆ ಟುಲಿಪ್ ಸಿದ್ದಿಕ್ ಅವರನ್ನು ಕೂಡ ವಿಚಾರಣೆಗೊಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ. ನ್ಯಾಷನಲ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಎನ್‌ಡಿಎಂ) ಅಧ್ಯಕ್ಷ ಬಾಬಿ ಹಜ್ಜಾಜ್ ಅವರು ಈ ವಿಷಯವನ್ನು ಭ್ರಷ್ಟಾಚಾರ ನಿಗ್ರಹ ಆಯೋಗದ (ಎಸಿಸಿ) ಮುಂದೆ ತಂದಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಈ ಪ್ರಕರಣದಲ್ಲಿ ಹಸೀನಾ, ಜಾಯ್ ಮತ್ತು ಟುಲಿಪ್ ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಿಂದ ಮಲೇಷ್ಯಾದ ಬ್ಯಾಂಕ್‌ಗೆ ಐದು ಬಿಲಿಯನ್ ಯುಎಸ್ ಡಾಲರ್‌ಗಳನ್ನು ಕಳುಹಿಸಿದ್ದಾರೆ ಎಂದು ಹೈಕೋರ್ಟ್ ಆಯೋಗವನ್ನು ಕೇಳಿತ್ತು. ಈ ವಿಷಯದಲ್ಲಿ ಭ್ರಷ್ಟಾಚಾರ ನಿಗ್ರಹ ಆಯೋಗದ (ಎಸಿಸಿ) ನಿಷ್ಕ್ರಿಯತೆಯನ್ನು ಏಕೆ ಅಕ್ರಮ ಎಂದು ಘೋಷಿಸಬಾರದು? ರೂಪುರ್ ಪರಮಾಣು ವಿದ್ಯುತ್ ಸ್ಥಾವರವನ್ನು ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ 160 ಕಿಮೀ ದೂರದಲ್ಲಿರುವ ರೂಪ್‌ಪುರದಲ್ಲಿ ಸರ್ಕಾರಿ ಸ್ವಾಮ್ಯದ ರೊಸಾಟಮ್ ನಿರ್ಮಿಸುತ್ತಿದೆ. ಇದರ ನಿರ್ಮಾಣದಲ್ಲಿ ಹಲವು ಭಾರತೀಯ ಕಂಪನಿಗಳೂ ಭಾಗಿಯಾಗಿವೆ.

ವಿವಾದಾತ್ಮಕ ಉದ್ಯೋಗ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ತನ್ನ ಸರ್ಕಾರದ ವಿರುದ್ಧ ಸರ್ಕಾರಿ ವಿರೋಧಿ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ ನಂತರ ಹಸೀನಾ ರಾಜೀನಾಮೆ ನೀಡಿ ಆಗಸ್ಟ್ 5 ರಂದು ಭಾರತಕ್ಕೆ ಆಗಮಿಸಿದರು. ಹಸೀನಾ ನೇತೃತ್ವದ ಸರ್ಕಾರವು ಮಧ್ಯಂತರ ಸರ್ಕಾರದಿಂದ ಬದಲಾಯಿತು. ಪ್ರಸ್ತುತ 84 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರನ್ನು ಅದರ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಮಧ್ಯಂತರ ಸರ್ಕಾರದ ಆಗಮನದ ನಂತರ ಶೇಖ್ ಹಸೀನಾ ಮತ್ತು ಅವರ ಮಾಜಿ ಕ್ಯಾಬಿನೆಟ್ ಮಂತ್ರಿಗಳು, ಸಲಹೆಗಾರರು, ಸೈನ್ಯ ಮತ್ತು ನಾಗರಿಕ ಅಧಿಕಾರಿಗಳ ವಿರುದ್ಧ ಮಾನವೀಯತೆ ಮತ್ತು ನರಮೇಧದ ವಿರುದ್ಧದ ಅಪರಾಧಗಳಿಗಾಗಿ ಬಂಧನ ವಾರಂಟ್‌ಗಳನ್ನು ಹೊರಡಿಸಲಾಯಿತು.(ಏಜೆನ್ಸೀಸ್​​)