ನ್ಯೂಸ್

ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಕಿರುಕುಳ ಘಟನೆ ಆಗುತ್ತೆ; ಅಚ್ಚರಿ ಹೇಳಿಕೆ ಕೊಟ್ಟ ಪರಮೇಶ್ವರ್​ | Statement

Statement : ಬೆಂಗಳೂರಿನ ಸುದ್ದೆಗುಂಟೇಪಾಳ್ಯದಲ್ಲಿ ತಡರಾತ್ರಿ ನಿರ್ಜನ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಎರಗಿದ ವ್ಯಕ್ತಿಯೊಬ್ಬ, ಆಕೆಯ ಖಾಸಗಿ ಅಂಗಾಂಗ ಸ್ಪರ್ಶಿಸಿ, ಅನುಚಿತ ವರ್ತೆನೆ ಮಾಡಿರುವ ಅಘಾತಕಾರಿ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್​ ಬೇಜಾವಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ, ಇಷ್ಟು ದೊಡ್ಡ ಸಿಟಿಯಲ್ಲಿ ಅಲ್ಲಿ ಇಲ್ಲಿ ಇಂತಹ ಒಂದು ಘಟನೆಗಳು ಆಗುತ್ತದೆ. ನಿತ್ಯವೂ ಪೊಲೀಸ್ ಕಮೀಷನರ್‌ಗೆ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು ಎಂದು ಹೇಳುತ್ತೇನೆ. ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ಏನು ಆಗುತ್ತಿದೆ ಅದನ್ನು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಮಾಡಬೇಕು ಎಮದು ನಿತ್ಯ ಸೂಚನೆ ಕೊಡುತ್ತೇನೆ ಎಂದಿದ್ದಾರೆ.

ಬೀಟ್ ವ್ಯವಸ್ಥೆ ಮತ್ತಷ್ಟು ಪರಿಣಾಮವಾಗಿ ಮಾಡಿ ಎಂದು ಇವತ್ತು ಕೂಡ ಕಮೀಷನರ್‌ಗೆ ಸೂಚನೆ ನೀಡಿದ್ದೇನೆ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟರು.

ಘಟನೆ ಏನು..?

ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಎರಗಿದ ವ್ಯಕ್ತಿಯೊಬ್ಬ, ಆಕೆಯ ಖಾಸಗಿ ಅಂಗಾಂಗ ಸ್ಪರ್ಶಿಸಿ, ಅನುಚಿತ ವರ್ತೆನೆ ಮಾಡಿರುವ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದೆ.

ಈ ಘಟನೆಯ ಕೃತ್ಯ ಏ.4ರ ಬೆಳಗಿನ ಜಾವ 2 ಗಂಟೆಗೆ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಲೈಂಜಗಿಕ ದೌರ್ಜನ್ಯ ಕಾಯ್ದೆಯಡಿ ಇತನ ವಿರುದ್ಧ ಸುದ್ದೆಗುಂಟೇಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.