ನ್ಯೂಸ್

ವೇತನ ತಾರತಮ್ಯ ಖಂಡಿಸಿ ವಿಮ್ಸ್ ಶುಶ್ರೂಷಕರಿಂದ ಪ್ರತಿಭಟನೆ

sspmiracle1982

ಬಳ್ಳಾರಿ : ನಗರದ ವಿಮ್ಸ್ ಆಸ್ಪತ್ರೆಯ ಗುತ್ತಿಗೆ ಆಧಾರಿತ ಶುಶ್ರೂಷಕರು ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ವಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಶುಶ್ರೂಷಕರು 20 ಸಾವಿರ ರೂ. ಬದಲಿಗೆ 14800 ರೂ. ವೇತನ ನೀಡಲಾಗುತ್ತಿದೆ.

ವೇತನ ತಾರತಮ್ಯ ಸರಿಪಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು. ಕೋವಿಡ್ ವಾರ್ಡ್ ಗಳಿಗೆ ನಿಯೋಜನೆ ಮಾಡುತ್ತಿರುವುದರಿಂದ ಜೀವ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.