ಬೇಕರಿಯೊಂದು 94 ವರ್ಷದ ವೃದ್ಧೆಗೆ ಬ್ರೆಡ್ ಕೊಡಲು ನಿರಾಕರಿಸಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ. ಇಂಗ್ಲೆಂಡ್ನ ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿರುವ ಬರ್ಡ್ಸ್ ಬೇಕರಿಗೆ ಬಂದ ಮಹಿಳೆಗೆ ಬ್ರೆಡ್ ಕೊಡಲು ನಿರಾಕರಿಸಿದೆ.
ಎಡ್ನಾ ದಾಲ್ಚಿನ್ ಎಂಬ 94 ವರ್ಷದ ಮಹಿಳೆ ಬ್ರೆಡ್ ಖರೀದಿಸಿ, ನಗದು ರೂಪದಲ್ಲಿ ಹಣ ಕೊಟ್ಟರು. ಆದರೆ ಬೇಕರಿಯ ಮಾಲೀಕ ಅದನ್ನು ಸ್ವೀಕರಿಸಿದೆ, ಆನ್ಲೈನ್ ಪೇಮೆಂಟ್ ಮಾಡಲು ಹೇಳಿದ್ದಾರೆ. ನನ್ನ ಬಳಿ ಯಾವುದೇ ಬ್ಯಾಂಕ್ನ ಕಾರ್ಡ್ಗಳಾಗಲಿ, ಆನ್ಲೈನ್ ಪೇಮೆಂಟ್ ಸೌಕರ್ಯವಾಗಲಿ ಇಲ್ಲ ಎಂದು ಅವರು ಹೇಳಿದ್ದಕ್ಕೆ, ಹಾಗಿದ್ದರೆ ಬ್ರೆಡ್ ವಾಪಸ್ ಇಡಿ ಎಂದು ಆತ ಹೇಳಿದ್ದಾಗಿ ಎಡ್ನಾ ತಿಳಿಸಿದ್ದಾರೆ.
ನನಗೆ ಬೇಕರಿಯ ಮಾಲೀಕನ ಮಾತು ಕೇಳಿ ಶಾಕ್ ಆಯಿತು. ನಗದು ಸ್ವೀಕರಿಸುವುದೇ ಇಲ್ಲ. ಆನ್ಲೈನ್ನಲ್ಲೇ ಕೊಡಿ ಎಂದರು. ಅಷ್ಟೇ ಅಲ್ಲ, ನನಗೆ ಕೊಟ್ಟಿದ್ದ ಬ್ರೆಡ್ ಪ್ಯಾಕೆಟ್ ಕೂಡ ವಾಪಸ್ ಪಡೆದರು. ಇದರಿಂದ ತುಂಬ ಮುಜುಗರಕ್ಕೀಡಾದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಬೇಕರಿಯವರನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ, ಲಾಕ್ಡೌನ್ ಇದೆ. ಕೊರನಾ ಇರುವುದರಿಂದ ನಮ್ಮ ಬೇಕರಿಯೂ ಬಂದ್ ಆಗಿತ್ತು. ಮತ್ತೆ ಇದನ್ನು ರೀ ಓಪನ್ ಮಾಡುವಾಗ ಸ್ಥಳೀಯ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರ ಅನ್ವಯ ಕ್ಯಾಶ್ ಸ್ವೀಕರಿಸುವುದಿಲ್ಲ. ಯಾಕೆಂದರೆ ಅದು ಕೊಳಕಾಗಿರುತ್ತದೆ. ನಾವು ಕಾರ್ಡ್ನ ಮೂಲಕವೇ ಹಣ ಪಡೆಯುತ್ತೇವೆ ಎಂದು ಭರವಸೆ ಮೂಡಿಸಿದ್ದರಿಂದಲೇ ಬೇಕರಿ ತೆರೆಯಲು ಅನುಮತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಜಾಹಿದ್ದೀನ್ ಅಂತ್ಯಗೊಂಡಿದೆ ಎಂದು ಭಾರತ ಭಾವಿಸುವ ಅಗತ್ಯವಿಲ್ಲ: ಹಿಜ್ಬುಲ್ ಉಗ್ರರಿಂದ ಬೆದರಿಕೆ
ಆದರೆ ಎಡ್ನಾ ವಯಸ್ಸಾದ ಮಹಿಳೆ. ಅವರು ಹಳೇ ಪದ್ಧತಿಯಲ್ಲೇ ಹಣ ನೀಡುತ್ತಿದ್ದಾರೆ. ಇಷ್ಟು ದಿನ ಕೂಡ ಕರೊನ ಇತ್ತು. ಹಲವು ಶಾಪ್ಗಳಲ್ಲಿ ನಗದು ನೀಡಿದ್ದೇನೆ. ಯಾರೂ ಈ ರೀತಿ ಮಾಡಿರಲಿಲ್ಲ ಎಂದು ಎಡ್ನಾ ಹೇಳಿದ್ದಾರೆ.
ನಾನು ಬರ್ಡ್ ಬೇಕರಿಗೇ ಹೋದೆ. ಯಾಕೆಂದರೆ ಅಲ್ಲಿನ ಬ್ರೆಡ್ ನನಗೆ ಇಷ್ಟ. ಹಾಗೇ ಸ್ವಲ್ಪ ಮಾಂಸವೂ ಬೇಕಿತ್ತು. ನಾನು ಖರೀದಿ ಮಾಡುತ್ತಿದ್ದಂತೆ, ಅಲ್ಲಿ ತಿನಿಸುಗಳನ್ನು ನೀಡಲು ನಿಂತಿದ್ದ ಯುವತಿ, ನಿಮ್ಮ ಬಳಿ ಕಾರ್ಡ್ ಇದೆಯಾ ಎಂದು ಕೇಳಿದರು. ನನಗೆ ಒಂದು ಸಲ ಅರ್ಥವೇ ಆಗಲಿಲ್ಲ. ಯಾಕೆಂದರೆ ನಾನು ಬ್ಯಾಂಕ್ನ ಕಾರ್ಡ್ ನೋಡಿಯೂ ಇಲ್ಲ ಎಂದು ಎಡ್ನಾ ಹೇಳಿದ್ದಾರೆ.ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರಲ್ಲಿ ತಪ್ಪೇನಿದೆ? ಶ್ರುತಿ ಹಾಸನ್ ಪ್ರಶ್ನೆ
ನನಗೆ ಗೊತ್ತಿರುವ ಪ್ರಕಾರ ಏಪ್ರಿಲ್ನಿಂದ ಮರು ಪ್ರಾರಂಭವಾದ ಈ ಬೇಕರಿಯಲ್ಲಿ ಇದುವರೆಗೆ ಎಂಟು ಮಂದಿ ವಯಸ್ಸಾದವರಿಗೆ ಅವರು ಕೇಳಿದ್ದನ್ನು ಕೊಡಲು ನಿರಾಕರಿಸಿದ್ದಾರೆ. ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)