ತಮಿಳುನಾಡು: ದಿವಂಗತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ತಮ್ಮ ಶ್ವಾನ ಟಿಟೊ ಜೊತೆ ಆಟವಾಡುತ್ತಿರುವ 7 ಅಡಿ ಐಸ್ ಕೇಕ್ ಪ್ರತಿಮೆಯನ್ನು ಇಲ್ಲಿ ಬೇಕರಿಯೊಂದು ಭಾನುವಾರ ಅನಾವರಣಗೊಳಿಸುವ ಮೂಲಕ ಟಾಟಾಗೆ ಅನನ್ಯ ಗೌರವ ಸಲ್ಲಿಸಿದೆ.
ರಾಮನಾಥಪುರಂ ಮೂಲದ ಐಶ್ವರ್ಯ ಹೆಸರಿನ ಬೇಕರಿ ಈ ಪ್ರತಿಮೆಯನ್ನು ತಯಾರಿಸಿದ್ದು, ತಮ್ಮ ಅಂಗಡಿ ಮುಂದೆ ಪ್ರದರ್ಶಿಶಿಸಲಾಗಿದೆ. ಇನ್ನು ಟಾಟಾ ಪ್ರತಿಮೆಯನ್ನು 60 ಕಿಲೋಗ್ರಾಂಗಳಷ್ಟು ಸಕ್ಕರೆ ಮತ್ತು 250 ಮೊಟ್ಟೆಗಳನ್ನು ಬಳಸಿ ರಚಿಸಲಾಗಿದೆ ಎಂದು ಬೇಕರಿ ಮಾಲೀಕರು ತಿಳಿಸಿದ್ದಾರೆ.
ವಾರ್ಷಿಕ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ ಅಂಗವಾಗಿ ತಯಾರಿಸಲಾದ ಈ ಪ್ರತಿಮೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಐಶ್ವರ್ಯ ಬೇಕರಿ ತನ್ನ ವಾರ್ಷಿಕ ಕ್ರಿಸ್ಮಸ್ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದ್ದು, ಗಮನಾರ್ಹ ವ್ಯಕ್ತಿಗಳ ಐಸ್ ಕೇಕ್ ಪ್ರತಿಮೆಗಳನ್ನು ರಚಿಸುತ್ತದೆ. ಹಿಂದಿನ ಗೌರವಗಳಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಮತ್ತು ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಪ್ರತಿಮೆ ಮಾಡಲಾಗಿತ್ತು. ಈ ಬಾರಿ ದಿವಂಗತ ಟಾಟಾಜೀ ಅವರ ಪ್ರತಿಮೆ ಮಾಡಿ ಎಲ್ಲರ ಗಮನ ಸೆಳೆದಿತ್ತು.
ಇದನ್ನೂ ಓದಿ: ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕು
ರತನ್ ಟಾಟಾ ಅವರು ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್ನ ಅಧ್ಯಕ್ಷರಾಗಿ 1991 ರಿಂದ 2012 ರವರೆಗೆ ಮತ್ತು ಅಕ್ಟೋಬರ್ 2016 ಮತ್ತು ಫೆಬ್ರವರಿ 2017 ರ ನಡುವೆ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಭಾರತೀಯ ಉದ್ಯಮಕ್ಕೆ ಅವರ ಕೊಡುಗೆಗಳು ಮತ್ತು ಸಾಮಾಜಿಕ ಕಾರಣಗಳಿಗಾಗಿ ಅವರ ಸಮರ್ಪಣೆ ಅವರಿಗೆ ಅಪಾರ ಗೌರವವನ್ನು ತಂದುಕೊಟ್ಟಿದೆ,(ಏಜೆನ್ಸೀಸ್).