ಲಂಡನ್: ನಿತ್ಯ ಬದುಕಿನಲ್ಲಿ ಬೇಸ್ತು ಬೀಳುವ ಪ್ರಸಂಗಗಳು ಅನೇಕ. ಅಂಥ ಪ್ರಕರಣಗಳಲ್ಲಿ ಕೆಲವು ವಿಡಿಯೋ ರೂಪದಲ್ಲೂ ಸಿಗುತ್ತವೆ. ಅವು ಕೆಲವೊಮ್ಮೆ ವೈರಲ್ ಆಗುವುದೂ ಇದೆ. ಹಾಗೆ ವೈರಲ್ ಆದ ವಿಡಿಯೋ ಇದು!
ಟಾಯ್ಲೆಟ್ ಗೆ ಶೌಚಕ್ಕೆಂದು ಹೋದವಳು ಇನ್ನೇನು ಕಮೋಡ್ ಮೇಲೆ ಕೂರಬೇಕಿತ್ತು. ಅದೇ ಕಮೋಡ್ ಒಳಗಿನಿಂದ ಹೊರಬರಲು ಪ್ರಯತ್ನಿಸುತ್ತಿತ್ತೊಂದು ಜೀವ. ಅದನ್ನು ಕಂಡ ಆಕೆಗೆ ಜೀವವೇ ಬಾಯಿಗೆ ಬಂದಂತಾಯಿತು. ಕೊನೆಗೆ ಅದೇನೆಂದು ನೋಡಿದ ಬಳಿಕ ಸುಧಾರಿಸಿಕೊಂಡು ವಿಡಿಯೋ ಮಾಡಿದಳಾಕೆ. ಆ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರ ಗಮನಸೆಳೆದಿದೆ.
ವಿಡಿಯೋ ಮಾಡಿದಾಕೆಯ ಹೆಸರು ಜೆಸ್ಸಿಕಾ ಎಸ್ಪ್ವಾಲ್. ಕ್ವೀನ್ಸ್ಲ್ಯಾಂಡ್ನಲ್ಲಿ ನಡೆದ ಘಟನೆ ಎಂಬ ಸಂಕ್ಷಿಪ್ತ ಮಾಹಿತಿ ಇದ್ದು, ಗೂಗಲ್ ನಲ್ಲಿ ಜಾಲಾಡಿದಾಗ 2018ರ ಮಾಹಿತಿ ಕಂಡುಬಂದಿದೆ. ಆದರೂ, ವಿಡಿಯೋ ನೋಡುವುದಕ್ಕೇನೂ ಅಡ್ಡಿ ಇಲ್ಲ. ಆ ವಿಡಿಯೋದ ಲಿಂಕ್ ಇಲ್ಲಿದೆ..