ನ್ಯೂಸ್

ಕೇವಲ 1 ಕೋಟಿ ರೂ... ವರುಣ್​ ಧವನ್​ಗೆ ಹೊಸ ವರ್ಷದ ಕಹಿ! ಬಾಕ್ಸ್​ ಆಫೀಸ್​ನಲ್ಲಿ ಫ್ಲಾಪ್ ಆದ 'ಬೇಬಿ ಜಾನ್​' | Flop

Baby John Flop: ಕಳೆದ ವರ್ಷ ಡಿಸೆಂಬರ್​ 25ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಸೌತ್ ಬ್ಯೂಟಿ ಕೀರ್ತಿ ಸುರೇಶ್ ಮತ್ತು ಬಾಲಿವುಡ್​ ನಟ ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ಅಭಿನಯದ ‘ಬೇಬಿ ಜಾನ್’​ ಚಿತ್ರವು ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿದೆ. ಮೊದಲ ದಿನದಿಂದ ಇಂದಿನವರೆಗೂ ಪ್ರೇಕ್ಷಕರ ಗಮನಸೆಳೆಯುವಲ್ಲಿ ಹಿಂದುಳಿದಿರುವ ಬೇಬಿ ಜಾನ್​, ನಟನಿಗೆ ಮತ್ತೊಂದು ಸೋಲನ್ನು ಉಣಿಸಿರುವುದು ಸದ್ಯ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಬಂಡವಾಳ ಎತ್ತುವುದೇ ಸವಾಲು

ಕ್ರಿಸ್​ಮಸ್​ ಹಬ್ಬದ ದಿನದಂದೇ 'ಬೇಬಿ ಜಾನ್'​ ತೆರೆ ಕಾಣಲಿದೆ ಎಂದು ಚಿತ್ರತಂಡ ಅಧಿಕೃತ ದಿನಾಂಕ ಘೋಷಿಸಿದ ಮರು ದಿನದಿಂದಲೇ ಉತ್ತಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಚಿತ್ರ ತಯಾರಕರು ಅಂತಿಮವಾಗಿ ಬೇಬಿ ಜಾನ್ ಗೆಲುವು ಕಾಣುವಲ್ಲಿ ವಿಫಲರಾಗಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆಯಿರಲಿ ಹಾಕಿರುವ ಬಂಡವಾಳ ವಾಪಸ್​ ಬರುವಷ್ಟು ಆದಾಯ ಬಂದರೆ ಸಾಕು ಎನ್ನುವಂತಾಗಿದೆ ನಿರ್ಮಾಪಕರ ಪಾಡು.

ಕೇವಲ 1 ಕೋಟಿ ರೂ.

ಈ ವಾರವು ಗಲ್ಲಾಪೆಟ್ಟಿಗೆಯಲ್ಲಿ ಮಂದಗತಿಯ ಕಲೆಕ್ಷನ್ ಕಂಡಿರುವ ವರುಣ್ ಧವನ್ ಚಿತ್ರ, 9ನೇ ದಿನದಂದು ಕೇವಲ 1 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ರಿಲೀಸ್ ಆದ ದಿನದಿಂದ ಇಂದಿನವರೆಗೂ ಚಿತ್ರದ ಒಟ್ಟು ಗಳಿಕೆ ಕೇವಲ 36.40 ಕೋಟಿ ರೂ. ಎನ್ನಲಾಗಿದೆ. ತಮಿಳು ನಟ ದಳಪತಿ ವಿಜಯ್ ಅಭಿನಯದ 2016ರ ಆ್ಯಕ್ಷನ್ ಜಾನರ್​ನ 'ಥೇರಿ' ಸಿನಿಮಾದ ಹಿಂದಿ ರಿಮೇಕ್ ಇದಾಗಿದ್ದು, ಚಿತ್ರವನ್ನು ಅಟ್ಲೀ ನಿರ್ದೇಶಿಸಿದ್ದಾರೆ,(ಏಜೆನ್ಸೀಸ್).