ನ್ಯೂಸ್

ಕೊನೆಗೂ ನಿಜವಾಯ್ತು 'ಬಾಬಾ ವಂಗಾ' ನುಡಿದಿದ್ದ 2025ರ ಭವಿಷ್ಯವಾಣಿ! ಮುಂದೆ ಆಗೋದೇನು? Babavanga

Babavanga | ಜಗತ್ತಿನ ಅದ್ಭುತ ಭವಿಷ್ಯ ನುಡಿಯುವವರಲ್ಲಿ 'ಬಾಬಾ ವಂಗಾ' ಕೂಡ ಒಬ್ಬರಾಗಿದ್ದಾರೆ. ಇವರು ಈ ಹಿಂದೆ ನುಡಿದಿದ್ದ ಭವಿಷ್ಯವಾಣಿಗಳು ಇಂದಿಗೂ ಪ್ರತಿಧ್ವನಿಸುತ್ತವೆ. ಬಾಬಾ ವಂಗಾ ಅವರು 2025 ರಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್ ವ್ಯಸನಿಗಳಾಗುತ್ತೀರ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದರು. ಹಾಗೂ 2025 ರಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾಗುತ್ತೆ ಮತ್ತು 2043 ರ ವೇಳೆಗೆ ಯುರೋಪಿನಲ್ಲಿ ಮುಸ್ಲಿಂ ಆಡಳಿತ ಸ್ಥಾಪನೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಅವರು ಅಂದು ನುಡಿದಿದ್ದ ಭವಿಷ್ಯವಾಣಿಗಳು ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಈ ಭವಿಷ್ಯವಾಣಿಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಬಾಬಾ ವಾಂಗಾ ಯಾರು?

ದಿವ್ಯಜ್ಞಾನಿ ಬಾಬಾ ವಂಗಾ ಅವರು 2025 ರಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಬಲ್ಗೇರಿಯನ್ ಮೂಲದ ಬಾಬಾ ವಂಗಾ ಜನವರಿ 31, 1911 ರಂದು ಜನಿಸಿದರು. ಬಾಲ್ಯದಲ್ಲಿ ಅವರು ತಮ್ಮ ದೃಷ್ಟಿ ಕಳೆದುಕೊಂಡರು. ನಂತರ ಭವಿಷ್ಯದ ಬಗ್ಗೆ ಅಚ್ಚರಿಯ ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ಧರಾದರು. ಇದಲ್ಲದೆ ಅವರು ಹೇಳುವ ಹಲವು ವಿಷಯಗಳು ನಿಜವಾಗುವುದರಿಂದ ಅನೇಕ ಜನರು ಅವರ ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುತ್ತಾರೆ. ರಾಜಕೀಯ ಕ್ರಾಂತಿಗಳಿಂದ ಹಿಡಿದು ನೈಸರ್ಗಿಕ ವಿಕೋಪದವರೆಗೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಿಜವಾಗಿರುವುದರಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಅಂದಹಾಗೆ ಬಾಬಾ ವಂಗಾ ಹೇಳಿದ್ದನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಅಂದರೆ ಜನರು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗುತ್ತಾರೆ ಮತ್ತು ನಿರಂತರವಾಗಿ ತಮ್ಮ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳಿಗೆ ಅಂಟಿಕೊಂಡಿರುತ್ತಾರೆ ಎಂದು ಬಾಬಾ ವಂಗಾ ಒಮ್ಮೆ ಭವಿಷ್ಯ ನುಡಿದಿದ್ದರು.

ನಾವು ಮೊಬೈಲ್​ ಇಲ್ಲದೆ ಸ್ವಲ್ಪ ಸಮಯವನ್ನೂ ಕಳೆಯಲು ಸಾಧ್ಯವಿಲ್ಲ. ಊಟ ಮಾಡುವಾಗ, ನಡೆಯುವಾಗ ಮತ್ತು ಶೌಚಾಲಯದಲ್ಲಿಯೂ ಸಹ ಫೋನ್‌ಗಳನ್ನು ಬಳಸುತ್ತೇವೆ. ಈ ಫೋನಿನಲ್ಲಿ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲಗಳೇ ಹೆಚ್ಚು.

ಅಚ್ಚರಿಯ ವಿಷಯವೆಂದರೆ, ಅವರು ಈ ವಿಷಯದ ಬಗ್ಗೆ ಮಾತನಾಡುವಾಗ ಅವರ ಜೀವಿತಾವಧಿಯಲ್ಲಿ ಮೊಬೈಲ್ ಫೋನ್‌ಗಳು ಇನ್ನೂ ಆವಿಷ್ಕಾರಗೊಂಡಿರಲಿಲ್ಲ. ಅಂದಹಾಗೆ ತನ್ನ ಭವಿಷ್ಯವಾಣಿಯಲ್ಲಿ ತಂತ್ರಜ್ಞಾನವು ಮನುಷ್ಯರನ್ನು ತನ್ನ ಗುಲಾಮರನ್ನಾಗಿ ಹೇಗೆ ಮಾಡುತ್ತದೆ ಎಂಬುದನ್ನು ಅವರು ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ನಾವು ಫೋನ್‌ಗಳಿಗೆ ಎಷ್ಟು ವ್ಯಸನಿಯಾಗಿದ್ದೇವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸ್ಟಾರ್ಮ್‌ಫೋನ್ ನಮ್ಮ ಕೈಯಲ್ಲಿರುವ 11 ನೇ ಬೆರಳಿನಂತಾಗಿರೋದು ನಿಮ್ಮೆಲ್ಲರಿಗೂ ತಿಳಿದಿರೋ ವಿಷಯ.

ಮುಂದಿನ ಭವಿಷ್ಯವಾಣಿ ನಿಜವಾಗುತ್ತಾ?

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ವರದಿಯ ಪ್ರಕಾರ, ನಮ್ಮ ದೇಶದಲ್ಲಿ ಶೇಕಡಾ 24 ರಷ್ಟು ಮಕ್ಕಳು ಮಲಗುವ ಮುನ್ನ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಸುಮಾರು ಶೇಕಡಾ 37 ರಷ್ಟು ಮಕ್ಕಳು ಅತಿಯಾದ ಸ್ಕ್ರೀನ್ ಟೈಮ್​ನಿಂದಾಗಿ ತಮ್ಮ ಅಧ್ಯಯನದತ್ತ ಗಮನಹರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಬಾಬಾ ವಂಗಾ ಅವರು ಬದುಕಿದ್ದಾಗ ಸ್ಮಾರ್ಟ್‌ಫೋನ್‌ಗಳಿಂದ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ಭವಿಷ್ಯ ನುಡಿದಿದ್ದರು. ಈಗಾಗಲೇ ಅವರು ನುಡಿದಿರುವ ಮೂರು ಭವಿಷ್ಯವಾಣಿಯಲ್ಲಿ ಒಂದು ಮಾತು ನಿಜವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅವರು ನುಡಿದಿರುವ ಇತರ ಭವಿಷ್ಯವಾಣಿಗಳು ಸತ್ಯವಾಗುತ್ತವೆಯಾ ಕಾದು ನೋಡಬೇಕಿದೆ.