ನ್ಯೂಸ್

ಅಜರ್‌ಬೈಜಾನ್ ವಿಮಾನ ದುರಂತ: 67ರಲ್ಲಿ 29 ಮಂದಿ ಪವಾಡದಂತೆ ಬದುಕುಳಿಯಲು ಇವರಿಬ್ಬರೇ ಕಾರಣ | Real Heroes

Real Heroes: ಇತ್ತೀಚೆಗಷ್ಟೇ ಕಝಾಕಿಸ್ತಾನ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 67 ಪ್ರಯಾಣಿಕರ ಪೈಕಿ 29 ಮಂದಿ ಅಪಘಾತದಲ್ಲಿ ಮೃತಪಟ್ಟ ಘಟನೆ ಬಹುತೇಕರಿಗೆ ಗೊತ್ತಿದೆ. ಇಬ್ಬರು ಪೈಲೆಟ್​ಗಳು ಸೇರಿದಂತೆ ಒಟ್ಟು 38 ಮಂದಿ ದುರಂತದಲ್ಲಿ ಸಾವಿಗೀಡಾದರು. ವರದಿಗಳ ಪ್ರಕಾರ, ವಿಮಾನ ಪತನದ ಮುನ್ಸೂಚನೆ ದೊರೆತ ಸಮಯದಲ್ಲೇ 29 ಜನರ ಜೀವ ಉಳಿಸುವ ಪ್ರಯತ್ನಕ್ಕೆ ಅವಕಾಶ ಸಿಕ್ಕಿದ್ದು ಎಂಬುದೇ ಇದೀಗ ಅಚ್ಚರಿಯ ಸಂಗತಿ. ಅಸಲಿಗೆ ಇದೇ ಪವಾಡವಾಗಿ ತಿರುಗಿರುವುದು ಎಂಬ ವಿಷಯ ಮತ್ತೊಂದು ಅಚ್ಚರಿ.

ರಷ್ಯಾ ತಿರುಗೇಟು

ವರದಿಗಳ ಪ್ರಕಾರ, ರಷ್ಯಾ ನಡೆಸಿದ ಫೈರಿಂಗ್​ ಅಜರ್‌ಬೈಜಾನ್ ಏರ್‌ಲೈನ್ಸ್ ಎಂಬ್ರೇರ್ 190 ಜೆಟ್ ಪತನಕ್ಕೆ ಕಾರಣ ಎಂದು ಅಜರ್‌ಬೈಜಾನ್ ಅಧ್ಯಕ್ಷರು ಬಲವಾಗಿ ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್, ವಿಮಾನ ದುರಂತಕ್ಕೆ ಕ್ಷಮೆಯಾಚಿಸುವೆ ಹೊರತು ಆರೋಪಗಳನ್ನು ಒಪ್ಪುವುದಿಲ್ಲ ಎಂದು ಖಡಕ್ ತಿರುಗೇಟು ನೀಡಿದರು. ಇದೆಲ್ಲದರ ಮಧ್ಯೆ ನಿಜಕ್ಕೂ ವಿಮಾನ ಪತನಗೊಳ್ಳುವ ಕೆಲವು ಸಮಯಗಳ ಹಿಂದೆ ನಡೆದಿದ್ದೇನು? ಎಂಬುದನ್ನು ಅಜರ್‌ಬೈಜಾನ್ ಏರ್‌ಲೈನ್ಸ್ ಈಗ ಬಹಿರಂಗ ಪಡಿಸಿದೆ.

ರಿಯಲ್ ಹೀರೋಸ್​ಗೆ ಸಲಾಂ

67 ಜನರನ್ನು ಹೊತ್ತೊಯ್ದಿದ್ದ ವಿಮಾನ ಬಾಕುದಿಂದ ಗ್ರೋಜ್ನಿಗೆ ಪ್ರಯಾಣ ಬೆಳಸಿತ್ತು. ಈ ವೇಳೆ ಹವಾಮಾನ ವೈಪರೀತ್ಯದ ಹಿನ್ನಲೆ ಕಜಕಿಸ್ತಾನ್‌ನ ಅಕ್ಟೌ ಬಳಿ ತುರ್ತು ಭೂಸ್ಪರ್ಶ ಮಾಡಲು ನಮ್ಮ ರಿಯಲ್ ಹೀರೋಸ್​ ಆದ ಇಬ್ಬರು ಪೈಲೆಟ್​ಗಳು ನಿರ್ಧರಿಸಿದರು. ದುರಂತ ಸಂಭವಿಸುವ ಮುನ್ಸೂಚನೆಯನ್ನು ಸ್ಪಷ್ಟವಾಗಿ ಅರಿತಿದ್ದ ಇಬ್ಬರು ಪೈಲೆಟ್​ಗಳು, ತಮ್ಮ ಜೀವವನ್ನು ಲೆಕ್ಕಿಸದೆ, ಪ್ರಯಾಣಿಕರ ಜೀವವನ್ನು ಉಳಿಸಲು ಮುಂದಾದರು.

ತಮ್ಮನ್ನು ಹೊರತುಪಡಿಸಿ 29 ಮಂದಿಯ ಪ್ರಾಣವನ್ನು ಉಳಿಸುವಲ್ಲಿ ಅವರ ಪಾತ್ರ ದೊಡ್ಡದು. ಪೈಲೆಟ್‌ಗಳ ವೀರತನಕ್ಕೆ ನಮ್ಮ ಸಲಾಂ. ಅವರು ಇತಿಹಾಸ ಪುಟದಲ್ಲಿ ಎಂದೆಂದಿಗೂ ಅಜರಾಮರ ಎಂದು ಏರ್‌ಲೈನ್‌ನ ಅಧ್ಯಕ್ಷ ಸಮೀರ್ ರ್ಜಾಯೆವ್ ಪೈಲೆಟ್​ಗಳ ಕರ್ತವ್ಯ ನಿಷ್ಠೆ, ತ್ಯಾಗವನ್ನು ಸ್ಮರಿಸಿದ್ದಾರೆ,(ಏಜೆನ್ಸೀಸ್).