Ayodhya 
ನ್ಯೂಸ್

ಹೈಟೆಕ್ ಆಗಲಿದೆ ಅಯೋಧ್ಯೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಐತಿಹಾಸಿಕ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ಇಡೀ ವಿಶ್ವದ ಗಮನ ಅಯೋಧ್ಯೆ ಮೇಲೆ ನೆಟ್ಟಿದೆ. ಮಂದಿರ ನಿರ್ಮಾಣ ಬಳಿಕ ಇದು ಜಾಗತಿಕ ಮಟ್ಟದಲ್ಲಿ ಪ್ರವಾಸಿ ಕೇಂದ್ರವಾಗಲಿದೆ. ದೇಶ, ವಿದೇಶಗಳಿಂದ ಇಲ್ಲಿಗೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಮಂದಿರದ ಜತೆಗೆ ಪ್ರವಾಸೋದ್ಯಮ, ಸಾರಿಗೆ, ಮೂಲಸೌಕರ್ಯ, ಶಿಕ್ಷಣ ಸೇರಿ ಅಯೋಧ್ಯೆಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.

ಸಾರಿಗೆ ಮತ್ತು ಸಂಪರ್ಕ

  • ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣ. ಏರ್​ಪೋರ್ಟ್​ಗೆ ಶ್ರೀರಾಮನ ಹೆಸರು ನಾಮಕರಣ.
  • ಅಯೋಧ್ಯೆಯ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು. ರಾಮಂದಿರದ ವಿನ್ಯಾಸದಲ್ಲೇ ರೈಲ್ವೆ ನಿಲ್ದಾಣ ನವೀಕರಣ.
  • ಆಜಮ್​ಡ ಮತ್ತು ಬಹರೈಚ್ ನಡುವೆ ರಾಷ್ಟ್ರೀಯ ಹೆದ್ದಾರಿ-30 ನಿರ್ವಣ. ಯೋಜನೆಗೆ 252 ಕೋಟಿ ರೂ. ವೆಚ್ಚ ಸಾಧ್ಯತೆ.
  • ಹೊಸ ಬಸ್ ನಿಲ್ದಾಣ. ಯೋಜನೆ ಮೊತ್ತ -ಠಿ;7 ಕೋಟಿ
  • 275 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 27 ಬೈಪಾಸ್​ನಿಂದ ಅಯೋಧ್ಯೆಗೆ 2 ಕಿ.ಮೀ ಪ್ರತ್ಯೇಕ ರಸ್ತೆ.

ವಿಶ್ವಾದ್ಯಂತ ಭೂಮಿಪೂಜೆ ಕಾರ್ಯಕ್ರಮ ವೀಕ್ಷಣೆ

ಅಯೋಧ್ಯೆಯಲ್ಲಿ ಮಂದಿರ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೂಮಿಪೂಜೆ ನೆರವೇರಿ ಸಿದ ಕಾರ್ಯಕ್ರಮವನ್ನು ವಿಶ್ವಾದ್ಯಂತ ಜನರು ಕಣ್ತುಂಬಿ ಕೊಂಡಿದ್ದಾರೆ. ಬ್ರಿಟನ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಥಾಯ್ಲೆಂಡ್, ಸೌದಿ ಅರೇಬಿಯಾ, ಕುವೈತ್, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಾಪುರ, ನೇಪಾಳ ಇನ್ನೂ ದೇಶಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ದೂರದರ್ಶನ ವಾಹಿನಿ ಕಾರ್ಯಕ್ರಮದ ನೇಪ ಪ್ರಸಾರ ಮಾಡಿದೆ. ಭಾರತದ 200ಕ್ಕೂ ಹೆಚ್ಚು ವಾಹಿನಿಗಳೂ ಲೈವ್ ಪ್ರಸಾರ ಮಾಡಿವೆ.

ಧರ್ಮ, ಸಂಸ್ಕೃತಿ

  • ಸರಯೂ ನದಿ ತೀರದಲ್ಲಿ ಶ್ರೀರಾಮನ 251 ಮೀಟರ್ ಎತ್ತರದ ಪ್ರತಿಮೆ.
  • 17 ಕೋಟಿ ರೂ. ಮೊತ್ತದಲ್ಲಿ ತುಳಸಿ ಸ್ಮಾರಕ ಭವನದ ಜೀಣೋದ್ಧಾರ.
  • 3 ಕೋಟಿ ರೂ. ವೆಚ್ಚದಲ್ಲಿ ರಾಮ ಕಥಾ ಪಾರ್ಕ್ ವಿಸ್ತರಣೆ.
  • ಸರಯೂ ಘಾಟ್​ನಿಂದ ಮಂದಿರದವರೆಗಿನ ರಸ್ತೆ ಅಗಲೀಕರಣ.
  • ಹನುಮಾನ್ ಗಢಿ, ದಶರಥ ಮಹಲ್, ಕನಕ ಭವನ, ಜಂಕಿ ಮಂದಿರ, ದಿಗಂಬರ ಅಖಾಡಾ ಮತ್ತು ರಾಜದ್ವಾರ ಮಂದಿರಕ್ಕೆ ದೀಪಾಲಂಕಾರ ವ್ಯವಸ್ಥೆ. ಯೋಜನೆ ಮೊತ್ತ 4 ಕೋಟಿ ರೂ.
  • ಪಂಚಕೋಶಿ ಪರಿಕ್ರಮ ಮಾರ್ಗದ ಅಗಲೀಕರಣ

ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು

  • ಕ್ವೀನ್ ಮೆಮೋರಿಯಲ್ ಪಾರ್ಕ್ ನಿರ್ಮಾಣ
  • ಅಂತಾರಾಷ್ಟ್ರೀಯ ರಾಮಲೀಲಾ ಕೇಂದ್ರ
  • ರಾಮ್ ಕಿ ಪೌಡಿಯ ಮರುನಿರ್ವಣ.
  • ರಾಮಾಯಣ ಸರ್ಕ್ಯೂಟ್ ಅಭಿವೃದ್ಧಿ.
  • ಲಕ್ಷ್ಮಣ ಕಿಲಾ ಘಾಟ್​ನ ನವೀಕರಣ.
  • ಗುಪ್ತಾರ್ ಘಾಟ್​ನ ನವೀಕರಣ.

ಶಿಕ್ಷಣ

# ಅಯೋಧ್ಯೆಯಲ್ಲಿ ರಾಜರ್ಷಿ ದಶರಥ ರಾಜ್ಯ ವೈದ್ಯಕೀಯ ಕಾಲೇಜು ನಿರ್ಮಾಣ.