ಸಿಡ್ನಿ : ಭಾರತಕ್ಕೆ ಸೇರಿದವೆನ್ನಲಾದ ಸುಮಾರು 16 ಕೋಟಿ ರೂಪಾಯಿ ಬೆಲೆ ಬಾಳುವ 14 ಕಲಾಕೃತಿಗಳನ್ನು ಹಿಂದುರಿಗಿಸಲಾಗುವುದೆಂದು ಆಸ್ಟ್ರೇಲಿಯದ ರಾಷ್ಟ್ರೀಯ ಮ್ಯೂಸಿಯಂ ಹೇಳಿದೆ. ಹಾಲಿ ನ್ಯಾಷನಲ್ ಗ್ಯಾಲರಿ ಆಫ್ ಆಸ್ಟ್ರೇಲಿಯದಲ್ಲಿರುವ ಈ ಕಲಾಕೃತಿಗಳಲ್ಲಿ ಕನಿಷ್ಠ ಆರು ಕಲಾಕೃತಿಗಳು ಕಳವು ಮಾಡಲ್ಪಟ್ಟವಾಗಿವೆ ಎನ್ನಲಾಗಿದೆ.
ಗ್ಯಾಲರಿಯ ಏಷಿಯನ್ ಆರ್ಟ್ ಕಲೆಕ್ಷನ್ ವಿಭಾಗದಲ್ಲಿಡಲಾಗಿದ್ದ ಈ ಶಿಲ್ಪಗಳು, ಫೋಟೋಗಳು ಮತ್ತು ಒಂದು ಸ್ಕ್ರಾಲ್ಅನ್ನು ಬಹುತೇಕವಾಗಿ ಕಳ್ಳಸಾಗಣೆಯ ಆರೋಪ ಎದುರಿಸುತ್ತಿರುವ ಅಮೆರಿಕದ ಸುಭಾಷ್ ಕಪೂರ್ ಎಂಬ ಡೀಲರ್ನಿಂದ ಖರೀದಿಸಲಾಗಿತ್ತು ಎನ್ನಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ಕಲಾಕೃತಿಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಗ್ಯಾಲರಿ ನಿರ್ದೇಶಕ ನಿಕ್ ಮಿಟ್ಜೆವಿಕ್ ಹೇಳಿದ್ದಾರೆ. (ಏಜೆನ್ಸೀಸ್)