ನ್ಯೂಸ್

ದಾವಣಗೆರೆಯಲ್ಲಿನ ಕೆರೆ ಕಲುಷಿತ? ನೀರು ಸರಬರಾಜು ಸ್ಥಗಿತ

Webdesk - Athul Damale

ದಾವಣಗೆರೆ: ಏಷ್ಯದ 2ನೇ ಅತೀ ದೊಡ್ಡ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದರೆ ಏನು? ಹೌದು, ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿ ಕಲುಷಿತ ನೀರು ಪ್ರಕರಣ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಸೂಳೆಕೆರೆ ನೀರು ತಾತ್ಕಾಲಿಕ ಬಂದ್ ಮಾಡಲಾಗಿದೆ. ಈ ಮಹತ್ವದ ನಿರ್ಧಾರವನ್ನು ಚನ್ನಗಿರಿ ಪುರಸಭೆಯ ತುರ್ತು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಕಲುಷಿತಗೊಂಡ ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಎಂಬ ಖ್ಯಾತಿ ಪಡೆದ ಸೂಳೆಕೆರೆಯ ನೀರು ಈಗ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ. ಕೆರೆಯ ನೀರು ಕಲುಷಿತಗೊಂಡಿದ್ದು ಬಣ್ಣವೂ ಬದಲಾಗಿದೆ. ಅದಲ್ಲದೇ ಸರಿಯಾಗಿ ಶುದ್ದಿಕರಣ ಆಗಿಲ್ಲ ಎಂದು ಶಿವಮೊಗ್ಗ ಜಿಲ್ಲೆಯ ಸರ್ವೇಕ್ಷಣ ಇಲಾಖೆ ವರದಿ ನೀಡಿದ್ದು ಈ ಕುರಿತಾಗಿ ಚನ್ನಗಿರಿ ಪುರಸಭೆ ಅಧ್ಯಕ್ಷ ಲಕ್ಷ್ಮೀದೇವಿ ಮಾಹಿತಿ ನೀಡಿದ್ದಾರೆ.

ಬಿಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಬಣ್ಣದ ಕಲುಷಿತ ನೀರು ಪೂರೈಕೆಯಾಗಿದ್ದು ಶುದ್ದೀಕರಣ ಘಟಕಕ್ಕೆ ಒಂದು ಕೋಟಿ ರೂ. ಮೊತ್ತದಲ್ಲಿ ಕ್ರಿಯಾ ಯೋಜನೆ ತಯಾರಿ ಮಾಡಲಾಗಿದೆ. ಕವಾಡಿಗರಹಟ್ಟಿಗೂ ಸೂಳೆಕೆರೆಯಿಂದ ನೀರು ಪೂರೈಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದ ಅಸ್ವಸ್ಥರ ಸಂಖ್ಯೆ ಹೆಚ್ಚಾಗಿತ್ತು.

ಸೂಳೆಕೆರೆಯಿಂದ ಸರಬರಾಜಾದ ನೀರು ಕಲುಷಿತವಾಗಿದ್ದು ಅದರಿಂದಾಗಿ ಐದು ಮಂದಿ ಮೃತಪಟ್ಟು, 200 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಸೂಳೆಕೆರೆಯಿಂದ ಚನ್ನಗಿರಿ ನಗರ ಸೇರಿದಂತೆ 14 ಗ್ರಾಮ ಪಂಚಾಯಿತಿಗೆ ನೀರು ಪೂರೈಕೆ ಮಾಡುವುದನ್ನು ಸಂಪೂರ್ಣವಾಗಿ ಪುರಸಭೆ ನಿಲ್ಲಿಸಿದೆ.