ಮುಂಬೈ: ಕಳೆದ ಕೆಲವು ವರ್ಷಗಳ ಹಿಂದೆ ಏಷ್ಯಾ ಚಿತ್ರರಂಗವೆಂದರೆ ಹಾಂಗ್ಕಾಂಗ್ ಸಿನಿಮಾಗಳನ್ನು ಹೇಳುತ್ತಿದ್ದರು. ಇದರಿಂದಲೇ ಬ್ರೂಸ್ಲೀ ಮತ್ತು ಜಾಕಿಚಾನ್ ಅವರಂತಹ ನಟರು ಪ್ರಪಂಚದಾದ್ಯಂತ ಎಲ್ಲರ ಗಮನ ಸೆಳೆದಿದ್ದರು. ಬಳಿಕ ನಟರಾದ ಶಾರೂಖ್ಖಾನ್ ಮತ್ತು ಅಕ್ಷಯ್ಕುಮಾರ್ ಜಾಗತಿಕ ಖ್ಯಾತಿ ಪಡೆಯುತ್ತಿದ್ದಂತೆ ಬಾಲಿವುಡ್ ಹೆಸರು ಮುನ್ನೆಲೆಗೆ ಬಂತು ಆದರೀಗ ಸಂಪೂರ್ಣ ಬದಲಾಗಿದೆ.
ಇದನ್ನು ಓದಿ: ನಗ್ನ ಚಿತ್ರಕ್ಕಾಗಿ ಕ್ಯಾರವಾನ್ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ರು; ಸ್ಫೋಟಕ ವಿಚಾರ ಬಿಚ್ಚಿಟ್ಟ ಜನಪ್ರಿಯ ನಟಿ
ಪ್ರಸ್ತುತ ಏಷ್ಯಾದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ದಕ್ಷಿಣ ಭಾರತದ ಸೂಪರ್ಸ್ಟಾರ್. ಅದು ಬೇರೆ ಯಾರು ಅಲ್ಲಾ ವಿಲನ್ ಆಗಿ ವೃತ್ತಿಜೀವನ ಆರಂಭಿಸಿ ಮುಗಿಲೆತ್ತರಕ್ಕೆ ಏರಿರುವ ನಟ ರಜನಿಕಾಂತ್. ಹೌದು ಸೂಪರ್ಸ್ಟಾರ್ ರಜನಿಕಾಂತ್ ಅವರು ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ಮೂಲಗಳ ಪ್ರಕಾರ ರಜನಿಕಾಂತ್ ಅವರು ತಮ್ಮ 171ನೇ ಸಿನಿಮಾವಾದ ಲೋಕೇಶ್ ಕನಕರಾಜ್ ಅವರ ಕೂಲಿ ಚಿತ್ರಕ್ಕೆ ಬರೋಬ್ಬರಿ 280 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
2016ರವರೆಗೆ ಅಮೀರ್ಖಾನ್ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ದಂಗಲ್ ಸಿನಿಮಾದಲ್ಲಿ ಅಭಿನಯಕ್ಕಾಗಿ ಅವರು 275 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಆದಾದ ಬಳಿಕ 2017ರಲ್ಲಿ ಜಾಕಿಚಾನ್ 60 ಮಿಲಿಯನ್ ಡಾಲರ್ (400 ಕೋಟಿ ರೂಪಾಯಿ) ಪಡೆಯುವ ಮೂಲಕ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಪಟ್ಟ ಗಿಟ್ಟಿಸಿಕೊಂಡರು. ಅಂದಿನಿಂದ ಯಾವುದೇ ಸ್ಟಾರ್ ಈ ಸ್ಥಾನವನ್ನು ಪಡೆದುಕೊಂಡಿರಲಿಲ್ಲ.
ಈಗ ರಜನಿಕಾಂತ್ ಆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಹುಕಾಲದವರೆಗೂ ರಜನಿಕಾಂತ್ ತಮ್ಮ ಸಿನಿಮಾಕ್ಕೆ ಸಂಭಾವನೆ ಮಾತ್ರ ಪಡೆಯುತ್ತಿದ್ದರು. ಇತ್ತೀಚೆಗೆ ಸಂಭಾವನೆ ಜತೆಗೆ ಸಿನಿಮಾ ಲಾಭದಲ್ಲಿನ ಹಂಚಿಕೆಯನ್ನು ಪಡೆದುಕೊಂಡ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಸಿನಿಮಾ ಬಾಕ್ಸಾಫೀಸ್ನಲ್ಲಿ ಮಾಡುತ್ತಿರುವ ಕಲೆಕ್ಷನ್ ಪರಿಗಣಿಸಿ ಪ್ರತಿ ಚಿತ್ರಕ್ಕೆ ಸುಮಾರು 150 ರಿಂದ 250 ಕೋಟಿ ರೂಪಾಯಿಗಳನ್ನು ಪಡೆಯುವ ಮೂಲಕರಜನಿಕಾಂತ್ ಬಾಲಿವುಡ್ ಖಾನ್ಗಳನ್ನು ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ.
ಲೋಕೇಶ್ ಆ್ಯಕ್ಷನ್ ಕಟ್ ಹೇಳುತ್ತಿರುವ ರಜನಿಕಾಂತ್ ಅವರ 171ನೇ ಸಿನಿಮಾ ಕೂಲಿಯಲ್ಲಿ ತೆಲುಗಿನ ನಾಗಾರ್ಜುನ, ಶ್ರುತಿಹಾಸನ್, ಸತ್ಯರಾಜ್, ಉಪೇಂದ್ರ, ಶಿವಕಾರ್ತಿಕೇಯನ್, ರಾಘವಲಾರೆನ್ಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನು 2025ಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)