ಹೈದರಾಬಾದ್: ವಯನಾಡ್ನಿಂದ ಚುನಾವಣೆಗೆ ಸ್ಪರ್ಧಿಸುವಲ್ಲ, ಹೈದ್ರಾಬಾದ್ನಿಂದ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೇರ ಸವಾಲನ್ನು ಎಸಗಿದ್ದಾರೆ.
ಸೋಮವಾರ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ ಅಸಾದುದ್ದೀನ್ ಓವೈಸಿ, ರಾಹುಲ್ ಗಾಂಧಿ ಅವರೇ 2024ರ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ವಯನಾಡ್ನಿಂದಲ್ಲ, ಹೈದರಾಬಾದ್‌ನಿಂದ ಸ್ಪರ್ಧಿಸಿ. ನಾನು ನಿಮಗೆ ನೇರ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದರು.
ಈ ಬಾರಿ ವಯನಾಡಿಗೆ ಹೋಗಬೇಡಿ, ಹೈದರಾಬಾದ್‌ಗೆ ಬನ್ನಿ. ಇಲ್ಲಿಂದಲೇ ಚುನಾವಣೆಗೆ ನನ್ನ ವಿರುದ್ಧ ಸ್ಪರ್ಧಿಸಿ, ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ, ಅಖಾಡಕ್ಕೆ ಬನ್ನಿ ಸ್ಪರ್ಧೆ ಮಾಡೋಣ ಎಂದು ರಾಹುಲ್ ಗಾಂಧಿಗೆ ಓಪನ್ ಚಾಲೆಂಜ್ ನೀಡಿದರು.
ಕಾಂಗ್ರೆಸ್‌ನವರು ಬಹಳಷ್ಟು ಮಾತನಾಡುತ್ತಾರೆ, ಇದಕ್ಕೆ ನಾನು ಸಿದ್ಧ. ಗಡ್ಡ ಮತ್ತು ಶೇರ್ವಾನಿ ಹೊಂದಿರುವ ನನ್ನನ್ನು ಎದುರಿಸಲು ಬನ್ನಿ, ಸ್ಪರ್ಧೆಯ ಅರ್ಥವೇನೆಂದು ನಿಮಗೆ ತಿಳಿಯುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ಬಾಬರಿ ಮಸೀದಿ ಮತ್ತು ಸೆಕ್ರೆಟರಿಯೇಟ್ ಮಸೀದಿ ಕೆಡವಲಾಯಿತು ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು,(ಏಜೆನ್ಸೀಸ್).