ನವದೆಹಲಿ: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ಗೆ (ಎಲ್ಐಸಿ) ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶೇಕಡಾ 10ರಷ್ಟು ಸಾರ್ವಜನಿಕ ಷೇರುಗಳನ್ನು ಸಾಧಿಸಲು ಹೆಚ್ಚುವರಿ ಮೂರು ವರ್ಷಗಳ ಸಮಯವನ್ನು ನೀಡಿದೆ.
ಪ್ರಸ್ತುತ, ಎಲ್‌ಐಸಿಯಲ್ಲಿ ಸರ್ಕಾರದ ಹಿಡುವಳಿ ಶೇಕಡಾ 96.50 ಆಗಿದ್ದರೆ, ಸಾರ್ವಜನಿಕ ಹಿಡುವಳಿ ಶೇಕಡಾ 3.50 ಇದೆ. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ಮೇ 14, 2024 ರ ಪತ್ರದ ಪ್ರಕಾರ, ಭಾರತೀಯ ಜೀವ ವಿಮಾ ನಿಗಮಕ್ಕೆ 10 ಪ್ರತಿಶತ ಸಾರ್ವಜನಿಕ ಷೇರುಗಳನ್ನು ಸಾಧಿಸಲು 3 ವರ್ಷಗಳ ಹೆಚ್ಚುವರಿ ಸಮಯವನ್ನು ನೀಡಲು ತನ್ನ ನಿರ್ಧಾರವನ್ನು ತಿಳಿಸಲಾಗಿದೆ.
ಈ ಕುರಿತ ಪ್ರಕಟಣೆಯ ನಂತರ, ಎಲ್‌ಐಸಿ ಷೇರುಗಳ ಬೆಲೆ ಬುಧವಾರ ಶೇಕಡಾ 6.82ರಷ್ಟು ಏರಿಕೆಯಾಗಿ 994.50 ರೂಪಾಯಿ ತಲುಪಿತು.
ಕಳೆದ ಒಂದು ತಿಂಗಳಲ್ಲಿ ಎಲ್ಐಸಿ ಷೇರುಗಳ ಬೆಲೆ 61 ಪ್ರತಿಶತದಷ್ಟು ಏರಿಕೆ ಕಂಡಿದೆ. ಈ ವರ್ಷದಲ್ಲಿ ಇದುವರೆಗೆ ಅಂದಾಜು 14 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಇದು ಶೇ. 72 ಕ್ಕಿಂತ ಹೆಚ್ಚು ಜಿಗಿದಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 1175 ರೂ ಮತ್ತು ಕನಿಷ್ಠ ಬೆಲೆ 561.20 ರೂ. ಇದೆ.
ಎಲ್ಐಸಿ ಈಗ ಮೇ 16, 2027 ರೊಳಗೆ 10% ಸಾರ್ವಜನಿಕ ಷೇರುಗಳನ್ನು ಪಡೆದುಕೊಳ್ಳಬಹುದು. ಪ್ರಸ್ತುತ, ಮಾರ್ಚ್ 31, 2024 ರವರೆಗೆ ಎಲ್ಐಸಿಯಲ್ಲಿ ಸಾರ್ವಜನಿಕ ಷೇರುಗಳ ಪ್ರಮಾಣ 3.5% ಆಗಿದೆ.
ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡಗಳನ್ನು ಎಲ್‌ಐಸಿ ಅನುಸರಿಸಲು ಸೆಬಿಯಿಂದ ಮೂರು ವರ್ಷಗಳ ವಿಸ್ತರಣೆಯನ್ನು ಪಡೆದುಕೊಂಡಿದೆ. ಸೆಬಿಯ ನಿರ್ಧಾರವು, ಎಲ್ಐಸಿಗೆ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ದಿನಾಂಕದಿಂದ ಐದು ವರ್ಷಗಳಲ್ಲಿ 10 ಪ್ರತಿಶತದಷ್ಟು ಸಾರ್ವಜನಿಕ ಷೇರುಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. "ಎಲ್‌ಐಸಿ 10 ಪ್ರತಿಶತ ಸಾರ್ವಜನಿಕ ಷೇರುಗಳನ್ನು ಸಾಧಿಸಲು ಪರಿಷ್ಕೃತ ಟೈಮ್‌ಲೈನ್ ಮೇ 16, 2027 ರವರೆಗೆ ಇರಲಿದೆ.
ಇತಿಹಾಸದಲ್ಲಿ ಭಾರತದ ಅತಿದೊಡ್ಡ ಐಪಿಒ ಎಲ್ಐಸಿಯದ್ದಾಗಿದೆ. ರೂ. 21,000 ಕೋಟಿ ಮೌಲ್ಯದ ಈ ಐಪಿಒ ಹಂಚಿಕೆಯಲ್ಲಿ ಸರ್ಕಾರ ಕೇವಲ 3.5% ಪಾಲನ್ನು ಮಾರಾಟ ಮಾಡಿತ್ತು. ಈ ಐಪಿಒ ಎರಡು ವರ್ಷಗಳ ಹಿಂದೆ ಮೇ 2022 ರಲ್ಲಿ ಬಂದಿತ್ತು. ಮೇ 17 ರಂದು ಎಲ್ಐಸಿ ಷೇರಿನ ಪಟ್ಟಿಯ ನಂತರ, ಷೇರುಗಳ ಬೆಲೆ ಹೆಚ್ಚಿನ ಸಮಯ ನಷ್ಟದಲ್ಲಿ ಉಳಿದಿತ್ತು. ಈ ವರ್ಷದ ಆರಂಭದಲ್ಲಿ ರೂ. 949 ರ ಐಪಿಒ ಬೆಲೆಯನ್ನು ದಾಟಿದ ನಂತರ ಎಲ್ಐಸಿ ಷೇರುಗಳು ಹೊಸ ದಾಖಲೆಯ ಏರಿಕೆಯನ್ನು ಕಂಡಿವೆ.