ನ್ಯೂಸ್

ಮಧ್ಯಪ್ರದೇಶದಲ್ಲಿ ಲಾಕ್​ಡೌನ್ ಘೋಷಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಭೂಪಾಲ್: ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕರೊನಾವೈರಸ್ ಸೋಂಕನ್ನು ಹತ್ತಿಕ್ಕಲು ಮೂರು ದಿನಗಳ ಲಾಕ್​ಡೌನ್ ಘೋಷಣೆ ಮಾಡಲಾಗಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಇಂದು ಈ ಘೋಷಣೆ ಮಾಡಿದ್ದಾರೆ. ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಲಾಕ್​ಡೌನ್ ಇರಲಿದ್ದು, ವಿಶೇಷವೆಂದರೆ ನಗರ ಪ್ರದೇಶಗಳಿಗೆ ಮಾತ್ರ ಇದು ಅನ್ವಯವಾಗಲಿದೆ.

ಮಧ್ಯಪ್ರದೇಶದ ಎಲ್ಲ ಒಂದು ಮತ್ತು ಎರಡನೇ ಹಂತದ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಇರಲಿದೆ. ಕಂಟೈನ್​ಮೆಂಟ್ ಪ್ರದೇಶಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಬುಧವಾರ ಅಂತ್ಯಕ್ಕೆ ಮಧ್ಯಪ್ರದೇಶದಲ್ಲಿ 4,043 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. 13 ಜನ ಮೃತಪಟ್ಟಿದ್ದಾರೆ. ಒಟ್ಟು ಇದುವರೆಗೆ ಅಲ್ಲಿ 318,014 ಜನರಿಗೆ ಸೋಂಕು ತಗುಲಿತ್ತು. 26,059 ಸಕ್ರಿಯ ಪ್ರಕರಣಗಳು ವರದಿಯಾಗಿವೆ.