ನ್ಯೂಸ್

ಬೆಂಗಳೂರಿನಲ್ಲಿ ನಟೋರಿಯಸ್ ರೌಡಿಗಳ ಬಂಧನ

ಬೆಂಗಳೂರು: ರಸ್ತೆಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದ ಆರ್ ಎಕ್ಸ್ ರವಿ ಆ್ಯಂಡ್ ಟೀಂ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಆರ್​ ಎಕ್ಸ್ ರವಿ ಗ್ಯಾಂಗ್​ ಸಂಚು ರೂಪಿಸಿತ್ತು. ಸೂಕ್ತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ರೌಡಿಗಳನ್ನು ಕಂಬಿ ಹಿಂದಕ್ಕೆ ತಳ್ಳಿದೆ.

ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಆರ್ ಎಕ್ಸ್ ರವಿ, ಶರತ್ ಬಾಬು, ದೀಪಕ್ ಕುಮಾರ್ ಸೇರಿ 6 ಜನರನ್ನು ಬಂಧಿಸಲಾಗಿದ್ದು, ಮೂರು ಲಾಂಗು, ಚಾಕು, ಕಾರದಪುಡಿ ಪೊಟ್ಟಣ, ಕೃತ್ಯಕ್ಕೆ ಬಳಸಿದ್ದ ಓಮಿನಿ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹಲವು ಕೇಸ್​ಗಳು ಇವೆ.