ನ್ಯೂಸ್

ಗ್ಯಾಸ್​​ಗೆ ಭರ್ಜರಿ ಸಬ್ಸಿಡಿಯನ್ನು ನೀಡಿ ಇಂದಿನಿಂದಲೇ ಜಾರಿ ಮಾಡಿದ ರಾಜಸ್ಥಾನ ಸರ್ಕಾರ

ರಾಜಸ್ತಾನ: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ರಾಜಸ್ಥಾನ ಸರ್ಕಾರ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಈ ಹಿಂದೆ ನೀಡಿದ ಭರವಸೆಯಂತೆ ಇಂದಿನಿಂದ ‍500ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ಸಿಎಂ ಅಶೋಕ್ ಗೆಹ್ಲೋಟ್ ಪ್ರಕಟಿಸಿದ್ದಾರೆ.

ರಾಜಸ್ಥಾನದ ಸುಮಾರು 14 ಲಕ್ಷ ಕುಟುಂಬಗಳು ಸೋಮವಾರ ಇಂದಿರಾಗಾಂಧಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯೋಜನೆಯಡಿ ತಲಾ 640 ರೂ.ಗಳ ಸಬ್ಸಿಡಿಯನ್ನು ಪಡೆಯಲಿವೆ. ಈ ಯೋಜನೆಯು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ತಲಾ 500 ರೂಪಾಯಿಗಳಿಗೆ ನೀಡುವ ಘೋಷಣೆಯಡಿ ಬರುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 640 ರೂ.ನೀಡಲಾಗುವುದು. ರಾಜ್ಯದಲ್ಲಿ ಸುಮಾರು 80 ಲಕ್ಷ ಕುಟುಂಬಗಳು ಈ ಯೋಜನೆಗೆ ಅರ್ಹವಾಗಿವೆ. ನಾವು ಇನ್ನೂ ಕೇಂದ್ರ ಸರ್ಕಾರದಿಂದ ಸರಿಯಾದ ಅಂಕಿ-ಅಂಶಗಳನ್ನು ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)