ಪುಣೆ: ಮಹಿಳೆಯೊಬ್ಬಳ ಪಿತ್ತಕೋಶದಿಂದ ಸುಮಾರು 1000 ಚಿಕ್ಕ ಕಲ್ಲುಗಳನ್ನು ತೆಗೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮಹಿಳೆಯ ಹೆಸರನ್ನು ಗೌಪ್ಯವಾಗಿ ಇರಿಸಲಾಗಿದ್ದು, ಕೆಲ ದಿನಗಳ ಹಿಂದೆ ಹೆರಿಗೆಯಾದ ಮೂವತ್ತು ವರ್ಷದ ಮಹಿಳೆಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಕೊನೆಗೆ ವೈದ್ಯರು ಆಕೆಯ 'ಸೋನೋಗ್ರಫಿ' ಮಾಡಿದ್ದಾರೆ. ಈ ವೇಳೆ ಮಹಿಳೆಯ ಪಿತ್ತಕೋಶದಲ್ಲಿ ಕಲ್ಲುಗಳು ಕಂಡು ಬಂದಿದ್ದು, ಮಗುವಿಗೆ ನಿಯಮಿತವಾಗಿ ಹಾಲುಣಿಸಬೇಕಾಗಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: 'ಅವರು' ನಿಮ್ಮ ಹೆಂಡತಿಯ ಹತ್ಯೆಗೈದು ಅಂತ್ಯಕ್ರಿಯೆ ಮಾಡಿದ್ದಾರೆ: ಸ್ನೇಹಿತನ ಕರೆಗೆ ಪತಿ ತತ್ತರ
ಆದರೆ ಹೊಟ್ಟೆಯಲ್ಲಿ ಪದೇ ಪದೇ ತೀವ್ರ ನೋವು ಕಾಣಿಸಿಕೊಂಡ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದು, ಕೇವಲ 20 ನಿಮಿಷದಲ್ಲಿ ಪಿತ್ತಕೋಶದಿಂದ ಸಾವಿರಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದು ಮಹಿಳೆಯ ನೋವಿನಿಂದ ಮುಕ್ತಿ ನೀಡಿದ್ದಾರೆ. ಪಿತ್ತಕೋಶದಿಂದ ಹಸಿರು, ಹಳದಿ ಕಲ್ಲುಗಳನ್ನು ತೆಗೆಯಲಾಗಿದೆ.
ಲ್ಯಾಪ್ರೊ ಒಬೆಸೊ ಸೆಂಟರ್‌ನ ಲ್ಯಾಪರೊಸ್ಕೋಪಿಕ್ ಮತ್ತು ಬಾರಿಯಾಟ್ರಿಕ್ ಸರ್ಜನ್ ಈ ಕುರಿತು ಮಾತನಾಡಿದ್ದು, ಮಹಿಳೆಯ ಪಿತ್ತಕೋಶದಲ್ಲಿ ಕಲ್ಲು ಇದ್ದಿದ್ದರಿಂದ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಆಕೆ ಸಾಕಷ್ಟು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದಳು. ಮರುಕಳಿಸುವ ತೀವ್ರವಾದ ನೋವಿನಿಂದಾಗಿ ಆಕೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು, ಸುಮಾರು 1000 ಕಲ್ಲುಗಳು ಕಂಡುಬಂದಿವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)