ನ್ಯೂಸ್

ವಯನಾಡ್ ಭೂಕುಸಿತ: ಸೇತುವೆ ಕಟ್ಟಿದ ಮೇಜರ್ ಸೀತಾ.. ಸಾವಿರಾರು ಜನರಿಗೆ ಸ್ಫೂರ್ತಿಯಾದಳು

ಕೇರಳ: ವಯನಾಡಿನ ಮುಂಡಕ್ಕೈ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನೂರಾರು ಜನರನ್ನು ಸೇನೆ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದೆ. ಕಲವರ  ಕುರುಹು ಇನ್ನೂ ತಿಳಿದುಬಂದಿಲ್ಲ, ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ತಾತ್ಕಾಲಿಕ ಬೈಲಿ ಸೇತುವೆಯ ನಿರ್ಮಾಣವನ್ನು ಸೇನೆಯು ಕೈಗೆತ್ತಿಕೊಂಡಿದೆ. 

ಈ ಬೈಲಿ ಸೇತುವೆಯನ್ನು ನಿರ್ಮಿಸಲು ಸೇನೆಯು ಎರಡು ದಿನಗಳಿಗಿಂತ ಹೆಚ್ಚು ಕಾಲ ಶ್ರಮಿಸಬೇಕಾಯಿತು. ಸೈನಿಕರು ಮತ್ತು ಇತರ ಸಿಬ್ಬಂದಿ ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳಲ್ಲಿ ಟನ್‌ಗಳಷ್ಟು ಭಾರವಾದ ಭಾಗಗಳನ್ನು  ಪ್ರವಾಹ ಪೀಡಿತ ಪ್ರದೇಶಕ್ಕೆ ಸ್ಥಳಾಂತರಿಸಿದರು.  ಸೇತುವೆಯ ನಿರ್ಮಾಣ  ಮಾಡಲಾಗಿದೆ. ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ 250 ಸೈನಿಕರು ಬೈಲಿ ಸೇತುವೆಯ ನಿರ್ಮಾಣದಲ್ಲಿ ಕೆಲಸ ಮಾಡಿದರು. ತಂಡದ ನೇತೃತ್ವವನ್ನು ಮೇಜರ್ ಶೆಲ್ಕೆ ವಹಿಸಿದ್ದರು. 190 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಸೇನೆ ಯಶಸ್ವಿಯಾಗಿ ನಿರ್ಮಿಸಿದೆ. ಸೇನಾ ಮಹಿಳಾ ಇಂಜಿನಿಯರ್ ಮೇಜರ್ ಸೀತಾ ಶೆಲ್ಕೆ  ಸೇತುವೆಯ ನಿರ್ಮಾಣದ ನೇತೃತ್ವ ವಹಿಸಿದ್ದರು. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಕಷ್ಟಪಟ್ಟು ನಿರ್ಮಿಸಿದ ಈ ಸೇತುವೆಯ ಮೇಲಿನಿಂದ ಚಲಿಸಲು ಅನೂಕೂಲವಾಗಲಿದೆ.

ಸೇನಾ ಮಹಿಳಾ ಇಂಜಿನಿಯರ್ ಮೇಜರ್ ಸೀತಾ ಶೆಲ್ಕೆ ಅವರು ಸೇನೆಯು ನಿರ್ಮಿಸಿದ ಬೈಲಿ ಸೇತುವೆಯ ಮೇಲೆ ಹೆಮ್ಮೆಯಿಂದ ನಿಂತಿರುವ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.  ಈ ಬೈಲಿ ಸೇತುವೆಯ ನಿರ್ಮಾಣದ ಹಿಂದೆ ಮೇಜರ್ ಸೀತಾ ಶೆಲ್ಕೆ ಮಹಿಳಾ ಶಕ್ತಿಯಾಗಿದ್ದಾರೆ.  ಯಾರು ಈ ಸೀತೆ?

ಮೇಜರ್ ಸೀತಾ ಅವರ ಪೂರ್ಣ ಹೆಸರು ಸೀತಾ ಅಶೋಕ್ ಶೆಲ್ಕೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಪರ್ನರ್‌ ತಾಲೂಕಿನ ಗಾಡಿಲ್‌ಗಾಂವ್‌ ಎಂಬ ಪುಟ್ಟ ಗ್ರಾಮದಿಂದ ಸೇನೆಗೆ ಸೇರ್ಪಡೆಯಾದರು. ಗೋಡಿಲಗಾಂವ್ ಕೇವಲ 600 ಜನಸಂಖ್ಯೆಯನ್ನು ಹೊಂದಿರುವ ಒಂದು ಸಣ್ಣ ಹಳ್ಳಿಯಾಗಿದೆ. ವಕೀಲ ಅಶೋಕ್ ಬಿಖಾಜಿ ಶೆಲ್ಕೆ ಅವರ ನಾಲ್ಕು ಮಕ್ಕಳಲ್ಲಿ ಸೀತಾ ಒಬ್ಬರು. ಸೀತಾ ಅಹ್ಮದ್‌ನಗರದ ಪ್ರವರ ರೂರಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ನಂತರ ಸೈನ್ಯಕ್ಕೆ ಸೇರಿದರು.

ಸೀತಾ ಶೆಲ್ಕೆ ಅವರ ಗುರಿ ಐಪಿಎಸ್ ಆಗುವುದು. ಆದರೆ, ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಗುರಿ ತಲುಪಲು ಸಾಧ್ಯವಾಗಿಲ್ಲ. ಅದರ ನಂತರ ಅವರು ಭಾರತೀಯ ಸೇನೆಗೆ ಸೇರುವತ್ತ ಗಮನ ಹರಿಸಿದರು.  2012ರಲ್ಲಿ ಸೇನೆ ಸೇರಿದರು. ಸೀತಾ ಶೆಲ್ಕೆ ಅವರು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ತರಬೇತಿಯನ್ನು ಪೂರ್ಣಗೊಳಿಸಿದರು.