ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಭಯೋತ್ಪಾದಕರ ಮೇಲೆ ನಡೆದ ಎನ್ಕೌಂಟರ್ ಸಂದರ್ಭದಲ್ಲಿ ಸೇನೆಯ ಶ್ವಾನ ಗಾಯಗೊಂಡಿತ್ತು. 'ಝೂಮ್' ಹೆಸರಿನ ಶ್ವಾನವನ್ನು ನಂತರ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದೀಗ ಗಾಯಗೊಂಡಿದ್ದ ಭಾರತೀಯ ಸೇನೆಯ ಶ್ವಾನ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಗಾಯಗೊಂಡಿದ್ದ ಶ್ವಾನವನ್ನು ಶ್ರೀನಗರದ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚೇತರಿಸಿಕೊಳ್ಳುತ್ತಿದ್ದ ಶ್ವಾನ, ಇಂದು (ಅ.13) ಹಠಾತ್ತನೆ ಉಸಿರಾಟ ನಿಲ್ಲಿಸಿದೆ. ಅನಂತ್ನಾಗ್ನ ಕೋಕಾರ್ನಾಗ್ನಲ್ಲಿ ನಡೆದ ಭಯೋತ್ಪಾದಕರ ಮೇಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಎರಡು ಗುಂಡುಗಳು ಶ್ವಾನ ದೇಹದೊಳಕ್ಕೆ ಹೊಕ್ಕು, ಗಂಭೀರ ಗಾಯವಾಗಿತ್ತು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಶ್ವಾನ ಗಂಭೀರ ಗಾಯಗೊಂಡಿದ್ದರೂ, ಉಗ್ರರ ವಿರುದ್ಧ ಹೋರಾಡಿದೆ. ಆಪರೇಷನ್ ಟ್ಯಾಂಗ್ಪಾವಾಸ್ ತಂಡದ ಪ್ರಮುಖ ಸದಸ್ಯರಲ್ಲಿ ಈ ಶ್ವಾನವೂ ಒಂದಾಗಿತ್ತು ಎಂದು ಹೇಳಿದ್ದಾರೆ. (ಏಜೆನ್ಸೀಸ್)